ಇತ್ತೀಚಿನ ದಿನಗಳಲ್ಲಿ ಅಣಬೆ ಕೃಷಿಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಕೃಷಿ ಉದ್ಯಮದ ಸಾಲಿಗೆ ಅಣಬೆ ಕೂಡ ಸೇರಿಕೊಂಡಿರುವ ಕಾರಣ ಪ್ರತೀ ದಿನ ಬಿಸಿನೆಸ್ ಮಾಡುವಂತಾಗಿದೆ. ಈ ಕಾರಣದಿಂದಾನೆ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಹಲವು ಪ್ರಾಂತ್ಯಗಳಲ್ಲಿ ಸಲೀಸಾಗಿ ಬೆಳೆಯಬಹುದಾದ ಆಯ್‌ಸ್ಟರ್ ಅಣಬೆ ಕೃಷಿ ಬಗ್ಗೆ ಈ ಕೋರ್ಸ್ ಕಂಪ್ಲೀಟ್ ಆಗಿ ಕಲಿಸಿಕೊಡುತ್ತದೆ.
ಅಣಬೆಗಳಿಗೆ ಎಲ್ಲ ಸಮಯದಲ್ಲೂ ಸಹ ಉತ್ತಮವಾದ ಬೇಡಿಕೆ ಇರುತ್ತದೆ. ಈ ಕಾರಣಕ್ಕೆ ಇದರ ಮಾರುಕಟ್ಟೆ ಯಾವಾಗಲು ಸಹ ಸ್ಥಿರವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಸಹ ಅಣಬೆಯು ಹೆಚ್ಚು ಪ್ರಯೋಜನಕಾರಿಯಾಗಿದೆ. ಅಣಬೆಗಳು ಪ್ರೋಟೀನ್ ಭರಿತವಾಗಿರುವುದರಿಂದ ಇದನ್ನು ಆಹಾರವಾಗಿ ಹೆಚ್ಚು ಸ್ವೀಕರಿಸಲಾಗುತ್ತದೆ. ಇದಲ್ಲದೆ ಕೆಲವು ಔಷಧಿಗಳ ತಯಾರಿಕೆಯಲ್ಲೂ ಸಹ ಅಣಬೆಗಳನ್ನು ಬಳಕೆ ಮಾಡುವುದನ್ನು ನಾವು ಗಮನಿಸಬಹುದಾಗಿದೆ.
ಅಣಬೆ ಕೃಷಿಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆನ್ನುವ ಅಗತ್ಯವಿರುವುದಿಲ್ಲ. ನೀವು ಇದನ್ನು ಅತ್ಯಂತ ಕಡಿಮೆ ಬಂಡವಾಳದಲ್ಲೂ ಸಹ ಶುರು ಮಾಡಬಹುದು ಮತ್ತು ಇದರಿಂದ ಉತ್ತಮ ಲಾಭವನ್ನು ಕೂಡ ಗಳಿಸಬಹುದಾಗಿದೆ. ಈ ಕೃಷಿಯನ್ನು ಮನೆಯ ಕೋಣೆಯಲ್ಲಿ ಅಥವಾ ಕೊಟ್ಟಿಗೆಯಲ್ಲೂ ಸಹ ಮಾಡಬಹುದಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಈ ಕೃಷಿಯನ್ನು ಅಳವಡಿಸಿಕೊಳ್ಳುವುದು ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಕಡಿಮೆ ಬಂಡವಾಳ ಮತ್ತು ಕಡಿಮೆ ಜಾಗದಲ್ಲಿ ಉತ್ತಮ ಆದಾಯವನ್ನು ಗಳಿಸಲು ಇದು ಸೂಕ್ತವಾದ ಕೃಷಿಯಾಗಿದೆ.
ಅಣಬೆ ಕೃಷಿಯ ಬಗ್ಗೆ ಉತ್ತಮ ಮಾಹಿತಿ ತಿಳಿಸಿಕೊಡುವ ಉದ್ದೇಶದಿಂದ ಅಣಬೆ ಕೃಷಿಯ ಕುರಿತ ಸಮಗ್ರ ಕೋರ್ಸ್ ಸಿದ್ಧಪಡಿಸಿಲಾಗಿದೆ. ನೀವೂ ಸಹ ಈ ಕೋರ್ಸ್ ಮೂಲಕ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು. ಅಣಬೆ ಕೃಷಿ ಮಾಡಿ ಸಕ್ಸಸ್ ಆಗಿರುವ ಜಿ.ಡಿ ರಮೇಶ್ ಅವರೇ ನಿಮಗೆ ಇಲ್ಲಿ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಈಗಲೇ ಕೋರ್ಸ್ ವೀಕ್ಷಿಸಿ ಅಣಬೆ ಕೃಷಿ ಮಾಡಿ ಸಕ್ಸಸ್ ಆಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 56Min
ಪಾಠಗಳ ಸಂಖ್ಯೆ
18 ವೀಡಿಯೊಗಳು
ನೀವು ಕಲಿಯುವುದು
Completion Certificate