ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರವು ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಪೋಷಕರನ್ನು ಪ್ರೋತ್ಸಾಹಿಸಲು ಪರಿಚಯಿಸಿದ ಜನಪ್ರಿಯ ಯೋಜನೆಯಾಗಿದೆ. ಈ ಯೋಜನೆಯು ತಮ್ಮ ಮಗಳ ಆರ್ಥಿಕ ಭವಿಷ್ಯ ಮತ್ತು ಉನ್ನತ ಶಿಕ್ಷಣಕ್ಕಾಗಿ ಹಣವನ್ನು ಉಳಿಸಲು ಪೋಷಕರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಹೆಚ್ಚಿನ ಬಡ್ಡಿ ದರವನ್ನು ನೀಡುವುದಲ್ಲದೆ ತೆರಿಗೆ ಮುಕ್ತ ರಿಟರ್ನ್ಸ್ ಸೇರಿದಂತೆ ಹಲವು ಪ್ರಯೋಜನಗಳೊಂದಿಗೆ ಬರುತ್ತದೆ.
ಪೋಷಕರು ತಮ್ಮ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ SSY ಯೋಜನೆಯ ಮೂಲಕ ಹೂಡಿಕೆ ಮಾಡಬಹುದು. ಯೋಜನೆಯು 21 ವರ್ಷಗಳ ಅವಧಿಯನ್ನು ಹೊಂದಿದೆ. ಕನಿಷ್ಠ ರೂ.250 ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ವಾರ್ಷಿಕ ಗರಿಷ್ಠ ಠೇವಣಿ ಮಿತಿ ರೂ. 1.5 ಲಕ್ಷ. ಅಲ್ಲದೆ ಈ ಯೋಜನೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಸುಕನ್ಯಾ ಸಮೃದ್ಧಿ ಯೋಜನೆ ಕೋರ್ಸ್ ಮೂಲಕ ಕಲಿಯಬಹುದು.
ಈ ಸುಕನ್ಯಾ ಸಮೃದ್ಧಿ ಯೋಜನೆ ಕೋರ್ಸ್ ನಲ್ಲಿ SSY ನಲ್ಲಿ ಹೂಡಿಕೆ ಮಾಡುವುದು ಮತ್ತು ಅವರ ಹೆಣ್ಣು ಮಗುವಿನ ಭವಿಷ್ಯವನ್ನು ಹೇಗೆ ಸುರಕ್ಷಿತಗೊಳಿಸುವುದು ಎಂಬುದನ್ನು ಪೋಷಕರಿಗೆ ಕಲಿಸುತ್ತದೆ. ಬಡ್ಡಿದರ, ಠೇವಣಿ ಮಿತಿಗಳು, ಹಿಂಪಡೆಯುವ ನಿಯಮಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಒಳಗೊಂಡಂತೆ ಯೋಜನೆಯ ಎಲ್ಲಾ ವಿವರಗಳೂ ಈ ಕೋರ್ಸ್ ನಲ್ಲಿದೆ.
ನೀವು SSY ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಿ ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಹಾಗೂ ಹೆಣ್ಣು ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 32Min
ಪಾಠಗಳ ಸಂಖ್ಯೆ
10 ವೀಡಿಯೊಗಳು
ನೀವು ಕಲಿಯುವುದು
Completion Certificate