ನಾಟಿ ಕೋಳಿ ಸಾಕಣೆ ಕೋರ್ಸ್‌ಗೆ ಸ್ವಾಗತ, ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೋಳಿ ಸಾಕಾಣಿಕೆಯತ್ತ ಮುಖ ಮಾಡಿದ್ದು, ಲಾಭದ ಮತ್ತು ಯಶಸ್ಸಿನ ಹಾದಿಯಲ್ಲಿದ್ದಾರೆ. ವಾಣಿಜ್ಯ /ನಾಟಿ ಕೋಳಿ ಸಾಕಣೆ ಕೃಷಿಯಲ್ಲಿ ಜನಪ್ರಿಯ ಉದ್ಯಮವಾಗಿದೆ.ಬ್ರಾಯ್ಲರ್ ಕೋಳಿಗಳಿಗಿಂತ ದೇಶಿಯ ಕೋಳಿ ಹೆಚ್ಚು ಆರೋಗ್ಯಕರವಾಗಿವೆ. ಹೀಗಾಗಿ ಬಹುತೇಕ ಜನರು ನಾಟಿ ಕೋಳಿಗಳತ್ತ ಒಲವು ತೋರುತ್ತಿದ್ದಾರೆ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಕೃಷಿ ಉದ್ಯಮವಾಗಿದೆ. ಈ ನಾಟಿ ಕೋಳಿಯನ್ನು ಹೇಗೆ ಸಾಕಣೆ ಮಾಡಬೇಕು ಎಂಬುವುದನ್ನು ಈ ಕೋರ್ಸ್ ನಲ್ಲಿ ಕಲಿಯುವಿರಿ.
ನಾಟಿ ಕೋಳಿ ಸೇವನೆಯಿಂದಾಗಿ ಹಲವು ಪ್ರಯೋಜನಗಳಿದೆ ಹೀಗಾಗಿ ಭಾರತದಲ್ಲಿ ನಾಟಿ ಕೋಳಿಗೆ ತುಂಬಾ ಬೇಡಿಕೆಯಿದ್ದು ಇದು ಬೆಳೆಯುತ್ತಿರುವ ಉದ್ಯಮವಾಗಿದೆ. ಹಾಗಾಗಿ ನಮ್ಮ ರೈತರು ನಾಟಟಿ ಕೋಳಿ ಸಾಕಣೆ ಮಾಡಿದರೆ ಉತ್ತಮ ಲಾಭ ಗಳಿಸಲು ಸಾಧ್ಯ. ಈ ಕೋರ್ಸ್ ಕೋಳಿ ಸಾಕಣೆ ಕೇಂದ್ರವನ್ನು ಪ್ರಾರಂಭಿಸುವ ಮತ್ತು ನಡೆಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿಯನ್ನು ನಿಮಗೆ ನೀಡುತ್ತದೆ.
ನಾಟಿ ಕೋಳಿ ಸಾಕಣೆ ಕೇಂದ್ರದ ಬೇಡಿಕೆ ಹೆಚ್ಚುತ್ತಿದೆ ಎಂದು ನಮ್ಮ ಮಾರುಕಟ್ಟೆ ಮೌಲ್ಯಮಾಪನ ಸಂಶೋಧನೆಯು ತೋರಿಸಿದೆ, ಇದು ಕೋಳಿ ಸಾಕಣೆ ಕೇಂದ್ರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಯಾರಿಗಾದರೂ ಲಾಭದಾಯಕ ವ್ಯಾಪಾರ ಅವಕಾಶವಾಗಿದೆ.
ಈ ಕೋರ್ಸ್ ನಲ್ಲಿ ಮಾರ್ಗದರ್ಶಕರಾದ ಸಾಗರ್ ಅರಸ್ ಗೆ ನಾಟಿ ಕೋಳಿ ಉದ್ಯಮದಲ್ಲಿ ವ್ಯಾಪಕ ಜ್ಞಾನ ಮತ್ತು ಅನುಭವ ಇದೆ. ಹಲವಾರು ವರ್ಷಗಳಿಂದ ತಮ್ಮದೇ ಆದ ನಾಟಿ ಕೋಳಿ ಸಾಕಣೆ ಕೇಂದ್ರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಇನ್ನು ಈ ಕೋರ್ಸ್ ನಲ್ಲಿ ನಾಟಿ ಕೋಳಿ ಸಾಕಣೆಯ ಪ್ರಯೋಜನಗಳು, ಸಂತಾನೋತ್ಪತ್ತಿ ಪ್ರಕ್ರಿಯೆ, ಆಹಾರ ನಿರ್ವಹಣೆ, ರೋಗ ನಿಯಂತ್ರಣ ಮತ್ತು ಮಾರಾಟ ತಂತ್ರಗಳನ್ನು ಒಳಗೊಂಡಂತೆ , ಲಾಭದಾಯಕ ನಾಟಿ ಕೋಳಿ ಸಾಕಣೆ ಕೇಂದ್ರವನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಕಲಿಯುತ್ತೀರಿ.
ನಾಟಿ ಕೋಳಿ ಸಾಕಣೆಯಲ್ಲಿ ಹೆಚ್ಚಿನ ಲಾಭದ ಸಾಮರ್ಥ್ಯವಿದ್ದು ನಿಮಗೆ ಹಲವಾರು ವಿಧಗಳಲ್ಲಿ ಪ್ರಯೋಜನವಾಗುವಂತೆ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಾಟಿ ಕೋಳಿಗೆ ಹೆಚ್ಚುತ್ತಿರುವ ಬೇಡಿಕೆಯಿದ್ದು, ಈ ಉದ್ಯಮದಲ್ಲಿ ಬೆಳವಣಿಗೆ ಮತ್ತು ವಿಸ್ತರಣೆಗೆ ಲೆಕ್ಕವಿಲ್ಲದಷ್ಟು ಅವಕಾಶಗಳಿವೆ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 17Min
ಪಾಠಗಳ ಸಂಖ್ಯೆ
18 ವೀಡಿಯೊಗಳು
ನೀವು ಕಲಿಯುವುದು
Completion Certificate