ಕ್ರೆಡಿಟ್ ಸ್ಕೋರ್ ಕೋರ್ಸ್, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅರ್ಥ ಮಾಡಿಕೊಳ್ಳಲು ಹಾಗೂ ನಿರ್ವಹಣೆ ಮಾಡಲು ಉತ್ತಮ ಮಾರ್ಗದರ್ಶಿಯಾಗಿದೆ. ಈ ಕೋರ್ಸ್ ಕ್ರೆಡಿಟ್ ಸ್ಕೋರ್‌ಗಳ ಎಲ್ಲ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಕ್ರೆಡಿಟ್ ಸ್ಕೋರ್ ಎಂದರೇನು ಹಾಗೂ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪರಿಚಯದೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಪರಿಶೀಲಿಸುವುದು ಮತ್ತು ಅದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸಲಹೆಗಳು ಮತ್ತು ತಂತ್ರಗಳನ್ನು ಒಳಗೊಂಡಿದೆ.
ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸುವುದು, ಸಾಲ ಕಡಿಮೆ ಮಾಡುವುದು ಮತ್ತು ಕ್ರೆಡಿಟ್ ಬಳಕೆ ನಿರ್ವಹಣೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವಿರಿ. ಸಾಧ್ಯವಾದಷ್ಟು ಉತ್ತಮ ಕ್ರೆಡಿಟ್ ಸ್ಕೋರ್ ಸಾಧಿಸಲು ನಿಮಗೆ ಸಹಾಯ ಮಾಡಲು ವಿವಿಧ ಪರಿಕರ ಮತ್ತು ತಂತ್ರಗಳ ಬಗ್ಗೆ ಕಲಿಯುವಿರಿ. ನಿಮ್ಮ ಹಣಕಾಸಿನ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತೇವೆ.
ಉತ್ತಮ ಕ್ರೆಡಿಟ್ ಸ್ಕೋರ್, ಆರೋಗ್ಯಕರ ಆರ್ಥಿಕ ಜೀವನದ ಮೂಲಾಧಾರವಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ನಿಮಗೆ ಸಾಲಗಳನ್ನು ಪಡೆಯಲು ಸಹಾಯ ಮಾಡಿ ಬಡ್ಡಿದರಗಳನ್ನು ಉಳಿಸುತ್ತದೆ. ಇವೆಲ್ಲವನ್ನು ಕಲಿತು ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇಟ್ಟುಕೊಳ್ಳಬಹುದು.
ಈ ಕೋರ್ಸ್ ನಿಮಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಸಂಪೂರ್ಣ ಪ್ರಾಕ್ಟಿಕಲ್ ತಿಳಿವಳಿಕೆಯನ್ನು ಒದಗಿಸುತ್ತದೆ. ನೀವು ಹೊಸದಾಗಿ ಕ್ರೆಡಿಟ್ ಕಾರ್ಡ್ ಪಡೆಯುವವರಾಗಿರಲಿ ಅಥವಾ ನಿಮ್ಮ ಪ್ರಸ್ತುತ ಕ್ರೆಡಿಟ್ ಪರಿಸ್ಥಿತಿಯನ್ನು ಸುಧಾರಿಸಲು ನೋಡುತ್ತಿರಲಿ, ಈ ಕೋರ್ಸ್ ಸಹಕಾರಿ. ಕೋರ್ಸ್ ಮುಗಿಯುವ ಹೊತ್ತಿಗೆ ಅತ್ಯುತ್ತಮ ಉತ್ತಮ ಕ್ರೆಡಿಟ್ ಸ್ಕೋರ್ ಸಾಧಿಸಸುವದನ್ನು ಸಂಪೂರ್ಣವಾಗಿ ಕಲಿಯುತ್ತೀರಿ.
ಈ ಕೋರ್ಸ್ ಒಳಗೊಂಡಿದೆ
ನೀವು ಕಲಿಯುವುದು
Completion Certificate