ಬಿಸಿನೆಸ್ಗಾಗಿ PR ಈ ಕೋರ್ಸ್ ಸಾರ್ವಜನಿಕ ಸಂಪರ್ಕವನ್ನು ವೃದ್ಧಿಸಲು ಬಯಸುವ ಜನರಿಗೆ ಅಗತ್ಯವಿರುವ ಕೋರ್ಸ್ ಆಗಿದೆ. ಈ ಕೋರ್ಸ್ ನಲ್ಲಿ PR ಉದ್ಯಮದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಕಲಿಯಬಹುದು.
ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಅನ್ನು ತಯಾರಿಸಲಾಗಿದೆ. ಎಲ್ಲ ರೀತಿಯ ಉದ್ಯಮಿ ಮತ್ತು ವ್ಯಕ್ತಿಗಳಿಗೆ ಈ ಕೋರ್ಸ್ ಅತ್ಯಂತ ಸಹಕಾರಿಯಾಗಿದೆ. ತಮ್ಮ ಟಾರ್ಗೆಟ್ ಆಡಿಯನ್ಸ್ಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿ, ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಲು ಅಗತ್ಯ ತಂತ್ರಗಳನ್ನು ಇಲ್ಲಿ ಹೇಳಿಕೊಡುತ್ತದೆ.
ಬಹಳಷ್ಟು ವರ್ಷಗಳಿಂದ PR ಬಿಸಿನೆಸ್ ನಲ್ಲಿರೋ Aim High Consultingನ ಸಿ.ಇ.ಓ, ಶ್ರೀ ಎಂ.ರವಿ ಶಂಕರ್ ಅವ್ರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ ಇಲ್ಲಿ. ಪರಿಣಾಮಕಾರಿಯಾದ PR ತಂತ್ರ ಅಭಿವೃದ್ಧಿಪಡಿಸುವುದು, ಮಾಧ್ಯಮಗಳೊಂದಿಗೆ ಸಂಪರ್ಕ ಸಾಧಿಸಿ ಉತ್ತಮ ಸಂಬಂಧ ಇಟ್ಟುಕೊಳ್ಳುವುದು, ಬಿಕ್ಕಟ್ಟುಗಳನ್ನು ನಿರ್ವಹಣೆ ಮಾಡುವುದು - ಮುಂತಾದ ಪ್ರಮುಖ ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ.
ಕೋರ್ಸ್ ಅಂತ್ಯದ ಸಮಯಕ್ಕೆ ನೀವು PR ಉದ್ಯಮದ ಬಗ್ಗೆ ಸರಿಯಾದ ತಿಳಿವಳಿಕೆ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ನಿಮ್ಮ ಟಾರ್ಗೆಟ್ ಗ್ರಾಹಕರೊಂದಿಗೆ ಪರಿಣಾಮಕಾರಿಯಾಗಿ ಸಂಭಾಷಣೆ ನಡೆಸಿ ಅವರ ಬ್ರ್ಯಾಂಡ್ಗಾಗಿ ನಂಬಿಕೆ, ವಿಶ್ವಾಸವನ್ನು ಬೆಳೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತೀರಿ. ಈ ಕೋರ್ಸ್ ನಿಮಗೆ ಅನೇಕ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಅದಷ್ಟೇ ಅಲ್ಲದೇ, ಹೊಸ ಗ್ರಾಹಕರನ್ನು ಆಕರ್ಷಿಸಿ, ಮಾರಾಟ ಹೆಚ್ಚಳ ಮಾಡಲು ಈ ಕೋರ್ಸ್ ಅವಶ್ಯಕವಾಗಿದೆ.
ಬಿಸಿನೆಸ್ ಜಗತ್ತಿನಲ್ಲಿ ಅನೇಕರು PR ಗೆ ಭಯಪಟ್ಟರೆ, ಈ ಕೋರ್ಸ್ ಸುಲಭವಾಗಿ ಅದನ್ನು ಅರ್ಥ ಮಾಡಿಸುವುದರ ಜತೆಗೆ ನಿಮ್ಮ ಟಾರ್ಗೆಟ್ ಗ್ರಾಹಕರೊಂದಿಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಸ್ಥಾಪನೆ ಮಾಡಿ ಅದನ್ನು ಉಳಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತದೆ. ಈ ಅವಕಾಶವನ್ನು ನೀವು ಕಳೆದುಕೊಳ್ಳಬೇಡಿ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ PR ಉದ್ಯಮದ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 34Min
ಪಾಠಗಳ ಸಂಖ್ಯೆ
13 ವೀಡಿಯೊಗಳು
ನೀವು ಕಲಿಯುವುದು
Completion Certificate