10m 28s
9m 31s
16m 46s
16m 16s
11m 13s
25m 12s
13m 21s
18m 7s
14m 52s
12m 24s
ಕೃಷಿ ಉದ್ಯಮಿಯಾಗಬೇಕೆಂಬ ಹಂಬಲವಿದೆಯೇ? ಸಾವಯವ ಕೃಷಿಯ ಸಾಧ್ಯತೆಗಳನ್ನು ಬಳಸಿಕೊಳ್ಳಲು ಬಯಸುವಿರಾ? ಹಾಗಾದರೆ, ನಿಮಗಾಗಿ ಒಂದು ಸುವರ್ಣಾವಕಾಶ! ನಮ್ಮ ಈ ಕೋರ್ಸ್, ನಿಮ್ಮ ಸ್ವಂತ ಸಾವಯವ ದಾಳಿಂಬೆ ಕೃಷಿ ವ್ಯವಹಾರವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಅದರಿಂದ ಹೇರಳ ಲಾಭ ಗಳಿಸಬೇಕು ಎಂಬುದರ ಕುರಿತು ಸಮಗ್ರ ಮಾರ್ಗದರ್ಶನ ನೀಡುತ್ತದೆ. ಈ ಕ್ಷೇತ್ರದಲ್ಲಿ ದಶಕಗಳ ಅನುಭವ ಮತ್ತು ಅವಿರತ ಶ್ರಮವನ್ನು ಹೊಂದಿರುವ ಅನುಭವಿ ಸಾವಯವ ಕೃಷಿ ತಜ್ಞರಾದ ಬಸವರಾಜ ಗುಡ್ಲನೂರ ಅವರ ಮಾರ್ಗದರ್ಶನದಲ್ಲಿ ಈ ಕೋರ್ಸ್, ಕೃಷಿಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
ನೈಸರ್ಗಿಕ, ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಾವಯವ ದಾಳಿಂಬೆ ಕೃಷಿ ಲಾಭದಾಯಕ ಉದ್ಯಮವಾಗಿ ಹೊರಹೊಮ್ಮಿದೆ. ಈ ಕೋರ್ಸ್ ಸೂಕ್ತ ಭೂಮಿಯನ್ನು ಆಯ್ಕೆ ಮಾಡುವುದು, ಮಣ್ಣಿನ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು, ಪರಿಸರ ಸ್ನೇಹಿ ಕೀಟ ನಿಯಂತ್ರಣ ವಿಧಾನಗಳನ್ನು ಬಳಸುವುದು ಮತ್ತು ಸುಸ್ಥಿರ ನೀರಿನ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಮುಂತಾದ ಪ್ರಾಕ್ಟಿಕಲ್ ಮಾಹಿತಿಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ.
ಈ ಕೋರ್ಸ್ ನೋಡುವವರು ಸಾವಯವ ಕೃಷಿ ಪದ್ಧತಿಗಳ ಸಮಗ್ರ ತಿಳುವಳಿಕೆಯನ್ನು ಪಡೆಯುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ತಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಅಮೂಲ್ಯವಾದ ಸಲಹೆಗಳನ್ನು ಪಡೆಯುತ್ತಾರೆ. ಸಾವಯವ ದಾಳಿಂಬೆ ರೈತರಾಗಿ ಯಶಸ್ಸು ಗಳಿಸಲು ಈಗಲೇ ಈ ಕೋರ್ಸ್ ವೀಕ್ಷಿಸಿ.
ಈ ಕೋರ್ಸ್ ಒಳಗೊಂಡಿದೆ