ವೆಜ್ ರೆಸ್ಟೋರೆಂಟ್ ಬಿಸಿನೆಸ್. ಇತ್ತೀಚೆಗೆ ಲಾಭದಾಯಕ ಬಿಸಿನೆಸ್ ಗಳಲ್ಲಿ ಒಂದು. ಈ ಕೋರ್ಸ್ ನಲ್ಲಿ ನೀವು ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡಿ ಸಕ್ಸಸ್ ಆಗುವುದು ಹೇಗೆ ಎಂದು ಸಂಪೂರ್ಣವಾಗಿ ಕಲಿಯಬಹುದು.
ಬೆಂಗಳೂರಿನಂತಹ ನಗರದ ಬಹಳಷ್ಟು ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಕೆಲಸಕ್ಕೆ ಹೋಗುತ್ತಿರುವುದರಿಂದ ಅನೇಕ ಮಂದಿಗೆ ಅಡಿಗೆ ಮಾಡಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಇಂದು ರೆಸ್ಟೋರೆಂಟ್ ಗಳ ಸಂಖ್ಯೆಯೂ ಕೂಡ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಬಹಳಷ್ಟು ಮಂದಿ ತಮ್ಮ ಊರನ್ನು ಬಿಟ್ಟು ಬೇರೆ ಬೇರೆ ನಗರಗಳಿಗೆ ಬಂದು ಕೆಲಸ ಮಾಡುತ್ತಿರುತ್ತಾರೆ. ಅಂಥಹವರಿಗೂ ಸಹ ಆಹಾರ ನೀಡುವ ಕೆಲಸವನ್ನು ಈ ವೆಜ್ ರೆಸ್ಟೋರೆಂಟ್ ಗಳು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿವೆ. ಆಹಾರ ಉದ್ಯಮ ಒಂದು ರಿಸೆಶನ್ ಫ್ರೀ ಉದ್ಯಮ ಆಗಿರುವುದರಿಂದ ಇದರಲ್ಲಿ ಯಾವಾಗಲೂ ಬೇಡಿಕೆ ಮತ್ತು ಅವಕಾಶಗಳು ಇದ್ದೇ ಇರುತ್ತದೆ.
ಭಾರತದಲ್ಲಿ ಸಂಘಟಿತ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮದ ವ್ಯಾಪ್ತಿ ಸುಮಾರು 1.60 ಲಕ್ಷ ಕೋಟಿಯಷ್ಟು ದೊಡ್ಡದಿದೆ. ಮತ್ತು ಅಸಂಘಟಿತ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮದ ವ್ಯಾಪ್ತಿ ಸುಮಾರು 2.5 ಲಕ್ಷ ಕೋಟಿಯಷ್ಟು ದೊಡ್ಡದಿದೆ. ಇದಲ್ಲದೆ ಒಟ್ಟಾರೆ ಈ ರೆಸ್ಟೋರೆಂಟ್ ಮತ್ತು ಫುಡ್ ಉದ್ಯಮ ಸುಮಾರು 4 ಲಕ್ಷ ಕೋಟಿಯಷ್ಟು ಬೃಹತ್ ಗಾತ್ರದ ಉದ್ಯಮ ಎಂದು ಅಂದಾಜಿಸಲಾಗಿದೆ. ಹಾಗಾಗಿ ವೆಜ್ ರೆಸ್ಟೋರೆಂಟ್ ಗಳಿಗೆ ಅವಕಾಶವಂತೂ ಜಾಸ್ತಿಯಾಗ್ತಾನೇ ಇದೆ. ಈ ಅವಕಾಶವನ್ನು ಬಳಸಿಕೊಂಡು ಈ ಬಿಸಿನೆಸ್ ಮಾಡಿ ಸಕ್ಸಸ್ ಆಗಬಹುದು
ಈ ಕೋರ್ಸ್ ನಲ್ಲಿ, ವೆಜ್ ರೆಸ್ಟೋರೆಂಟ್ ನಡೆಸಲು ಬೇಕಾದ ಜಾಗ, ಸೂಕ್ತ ಸ್ಥಳದ ಆಯ್ಕೆ, ಬಂಡವಾಳ, ಪರ್ಮಿಶನ್, ಲೈಸೆನ್ಸ್, ಗ್ರಾಹಕರ ಆಕರ್ಷಣೆ, ಮಾರ್ಕೆಟಿಂಗ್, ಬ್ರಾಂಡಿಂಗ್ ಹಾಗೂ ಉತ್ತಮ ಲಾಭ ಗಳಿಸು ತಂತ್ರಗಳ ಬಗ್ಗೆ ಸಂಪೂರ್ಣವಾಗಿ ಕಲಿಯುವಿರಿ. ವೆಜ್ ರೆಸ್ಟೋರೆಂಟ್ ಬಿಸಿನೆಸ್ ಮಾಡ್ತಾ ಯಶಸ್ವಿಯಯಾಗಿರೋ ಮಾರ್ಗದರ್ಶಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ.
ನೀವು ಫುಡ್ ಬಿಸಿನೆಸ್ ಅಥವಾ ವೆಜ್ ರೆಸ್ಟೋರೆಂಟ್ ಆರಂಭಿಸಿ ಸಕ್ಸಸ್ ಆಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಉತ್ತಮ ಆದಾಯ ಗಳಿಸುತ್ತಾ ಯಶಸ್ವಿಯಾಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
4Hrs 1Min
ಪಾಠಗಳ ಸಂಖ್ಯೆ
16 ವೀಡಿಯೊಗಳು
ನೀವು ಕಲಿಯುವುದು
Completion Certificate