ಬೋಯರ್ ಮೇಕೆ ಸಾಕಣೆ ಕೋರ್ಸ್ ಗೆ ಸ್ವಾಗತ. ಬೋಯರ್ ಮೇಕೆಗಳು ದಕ್ಷಿಣ ಆಫ್ರಿಕಾದ ತಳಿಯಾಗಿದ್ದು, ಇವುಗಳ ಮಾಂಸದ ಗುಣಮಟ್ಟ, ವಿವಿಧ ಪರಿಸರಗಳಿಗೆ ಹೊಂದಾಣಿಕೆಯಾಗುವ ರೀತಿ ಹಾಗೂ ಹೆಚ್ಚಿನ ಸಂತನೋತ್ಪತ್ತಿ, ವೇಗದ ಬೆಳವಣಿಗೆ ಮುಂತಾದವುಗಳಿಗೆ ಹೆಸರುವಾಸಿಯಾಗಿದೆ. ಈ ಮೇಕೆ ಸಾಕಣೆಯಿಂದ ರೈತರು ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದಾಗಿದೆ. ಆ ಕಾರಣದಿಂದಾಗಿ ರೈತರಿಗೋಸ್ಕರನೇ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ.
ಬೋಯರ್ ಮೇಕೆಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೋಯರ್ ಮೇಕೆ ಸಾಕಾಣಿಕೆ ಬಿಸಿನೆಸ್ ಲಾಭದಾಯವಾಗಿದೆ.
ನೀವು ಬೋಯರ್ ಮೇಕೆ ಸಾಕಾಣಿಕೆಯನ್ನು ಆರಂಭಿಸಲು ಆಸಕ್ತಿ ಹೊಂದಿದ್ದರೆ, ಈ ಮೇಕೆ ಸಾಕಣೆಯ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರಬೇಕು. ಬೋಯರ್ ಮೇಕೆ ಸಾಕಾಣಿಕೆ ಕೋರ್ಸ್ ನಲ್ಲಿ ನೀವು ಸರಿಯಾದ ಕುರಿ ತಳಿಗಳನ್ನು ಹೇಗೆ ಆಯ್ಕೆ ಮಾಡುವುದು, ಅವುಗಳ ಕಾಳಜಿಯನ್ನು ಹೇಗೆ ವಹಿಸಿಕೊಳ್ಳಬೇಕು ಎಂಬುವುದನ್ನು ಈ ಕೋರ್ಸ್‌ನ ಮಾರ್ಗದರ್ಶಕ ಮೊಹಮ್ಮದ್ ಯಾಹಿಯಾ ಮಾರ್ಗದರ್ಶನದಲ್ಲಿ ತಿಳಿಯಬಹುದು. ನೀವು ಬೋಯರ್ ಮೇಕೆ ಸಾಕಣೆಗೆ ಯಾವ ರೀತಿಯ ಭೂಮಿ, ಮೂಕಸೌಕರ್ಯ ಹಾಗೂ ಮೇಕೆಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಉತ್ತಮ ಗುಣಮಟ್ಟದ ಫೀಡ್ ಗಳ ಬಗ್ಗೆ ಈ ಕೋರ್ಸ್‌ನಲ್ಲಿ ತಿಳಿದುಕೊಳ್ಳಬಹುದು.
ಬೋಯರ್ ಮೇಕೆ ಸಾಕಣೆಯು ಕೃಷಿ ಮತ್ತು ಪಶುಸಂಗೋಪನೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಲಾಭದಾಯಕ ಕೃಷಿಯಾಗಿದೆ. ಸರಿಯಾದ ಜ್ಞಾನ, ಸಂಪನ್ಮೂಲಗಳು ಮತ್ತು ಮಾರ್ಗದರ್ಶನದೊಂದಿಗೆ, ನೀವು ಯಶಸ್ವಿ ಬೋಯರ್ ಮೇಕೆ ಸಾಕಾಣಿಕೆ ಬಿಸಿನೆಸ್ ಆರಂಭಿಸಿ ಕೈತುಂಬ ಆದಾಯವನ್ನು ಪಡೆಯಬಹುದು.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 35Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate