ನೀವು ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿದ್ದೀರಾ? ನಿಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್ ಅನ್ನಾಗಿ ಮಾಡಲು ಬಯಸಿದರೆ ನಿಮಗೆ ಈ ಫೋಟೋ ಸ್ಟುಡಿಯೋ ಬಿಸಿನೆಸ್ ಕೋರ್ಸ್ ಉತ್ತಮ ಆಯ್ಕೆ.! ಈ ಕೋರ್ಸ್ ನಲ್ಲಿ ಫೋಟೋ ಸ್ಟುಡಿಯೋ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಹೇಗೆ ಯಶಸ್ವಿಯಾಗುವುದು ಎಂಬುದನ್ನು ನೀವು ಕಲಿಯುವಿರಿ.
ಫೋಟೋಗ್ರಫಿ ಬಿಸಿನೆಸ್, ಅಂತ್ಯವಿಲ್ಲದ ಅವಕಾಶಗಳೊಂದಿಗೆ ಲಾಭದಾಯಕ ಮಾರುಕಟ್ಟೆಯಾಗಿದೆ. ಈ ಕೋರ್ಸ್ ಮೂಲಕ ಪ್ರಾಯೋಗಿಕ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯುತ್ತೀರಿ. ಉತ್ತಮ ಗುಣಮಟ್ಟದ ಫೋಟೋಗ್ರಫಿ ಸೇವೆಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಕಾರಣ, ಮಾರುಕಟ್ಟೆಯಲ್ಲಿ ಪ್ರವೇಶಿಸಲು ಮತ್ತು ಭಾರತದಲ್ಲಿ ನಿಮ್ಮ ಸ್ವಂತ ಫೋಟೋ ಸ್ಟುಡಿಯೋ ವ್ಯಾಪಾರವನ್ನು ಸ್ಥಾಪಿಸಲು ಇದು ಸೂಕ್ತ ಸಮಯ.
ಮಾರ್ಕೇಟ್ ರೀಸರ್ಚ್ ಪ್ರಕಾರ ಫೋಟೋ ಸ್ಟುಡಿಯೋ ಬಿಸಿನೆಸ್ ಗೆ ಹೆಚ್ಚಿನ ಬೇಡಿಕೆಯಿದೆ ಎಂದು ತೋರಿಸುತ್ತದೆ. ಹಾಗಾಗಿ ಹೊಸದಾಗಿ ಬಿಸಿನೆಸ್ ಮಾಡುವವರಿಗೆ ಸಹಾಯ ಆಗಲಿ ಅನ್ನುವ ಕಾರಣಕ್ಕೆ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನ ಮಾರ್ಗದರ್ಶಕರು ಅನುಭವಿಗಳಾಗಿದ್ದು ಈ ಬಿಸಿನೆಸ್ ನಲ್ಲಿ ಸಕ್ಸಸ್ ಆಗಿದ್ದಾರೆ. ಅವರೇ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಗೈಡ್ ಮಾಡ್ತಾರೆ.
ಫೋಟೋ ಸ್ಟುಡಿಯೊ ಗೆ ಜಾಗದ ಆಯ್ಕೆ, ಬಿಸಿನೆಸ್ ಪ್ಲಾನ್, ಗ್ರಾಹಕರ ಆಕರ್ಷಣೆ. ಬೆಲೆ ನಿಗದಿ ತಂತ್ರಗಳು ಸೇರಿದಂತೆ ಪ್ರಾಕ್ಟಿಕಲ್ ಆಗಿ ಎಲ್ಲವನ್ನೂ ಕಲಿಯಬಹುದು. ಫೋಟೋ ಸ್ಟುಡಿಯೋ ಬಿಸಿನೆಸ್ ಪ್ರಾರಂಭಿಸುವ ಬಗ್ಗೆ ನಿಮಗೆ ಕಾಳಜಿ ಇದ್ದರೆ ನೀವು ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ನಿಮ್ಮ ಫೋಟೋಗ್ರಫಿ ಬಿಸಿನೆಸ್ ಕಲ್ಪನೆಗಳನ್ನು ವಾಸ್ತವಕ್ಕೆ ಬದಲಾಯಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 6Min
ಪಾಠಗಳ ಸಂಖ್ಯೆ
14 ವೀಡಿಯೊಗಳು
ನೀವು ಕಲಿಯುವುದು
Completion Certificate