ಈ ಕೋರ್ಸ್, ನಿಮಗೆ ಅರಣ್ಯ ಕೃಷಿಯ ವಿಧಗಳು, ಅವುಗಳ ಪ್ರಯೋಜನಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಬಳಸುವ ತಂತ್ರಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಒದಗಿಸುತ್ತದೆ.
ಈ ಕೋರ್ಸ್‌ನಲ್ಲಿ, ನೀವು ಅಗ್ರೋ ಫಾರೆಸ್ಟ್ರಿ ಅಥವಾ ಅರಣ್ಯ ಕೃಷಿ ಅಂದ್ರೇನು, ಸಿಲ್ವೊಪಾಸ್ಚರ್ ಮತ್ತು ಅರಣ್ಯ ತೋಟಗಾರಿಕೆಯಂತಹ ವಿವಿಧ ರೀತಿಯ ಅರಣ್ಯ ಕೃಷಿ, ಔಷಧೀಯ ಸಸ್ಯಗಳು, ಮರ, ಅಣಬೆಗಳು ಮತ್ತು ಅರಣ್ಯ ಕೃಷಿಗೆ ಒಳಪಡುವ ಎಲ್ಲಾ ವಿಚಾರಗಳನ್ನು ಕಲಿಯುವಿರಿ. ಹಾಗೇನೇ ಅರಣ್ಯ ಕೃಷಿಗೆ ಬೇಕಾದ ಭೂಮಿ, ನಾಟಿ ವಿಧಾನ, ಬಂಡವಾಳ, ಗೊಬ್ಬರ, ನೀರು, ನಿರ್ವಹಣ ಸೇರಿದಂತೆ ಅರಣ್ಯ ಕೃಷಿಯ ಮೂಲಕ ಉತ್ಪಾದಿಸಬಹುದಾದ ವಿವಿಧ ಉತ್ಪನ್ನಗಳ ಬಗ್ಗೆಯೂ ಇಲ್ಲಿ ಕಲಿಯುವಿರಿ.ದೇಶದ ಶ್ರೀಮಂತ ಜೀವವೈವಿಧ್ಯ ಮತ್ತು ವ್ಯಾಪಕವಾದ ಅರಣ್ಯ ಪ್ರದೇಶವು ಅರಣ್ಯ ಕೃಷಿಗೆ ಸೂಕ್ತ ಸ್ಥಳವಾಗಿದೆ. ಈ ಕೋರ್ಸ್‌ನಲ್ಲಿ, ನೀವು ಭಾರತದಲ್ಲಿ ಅರಣ್ಯ ಕೃಷಿಯ ಅನನ್ಯ ಸವಾಲುಗಳು ಮತ್ತು ಅವಕಾಶಗಳು ಹಾಗೂ ಈ ಕೃಷಿಯಲ್ಲಿ ಯಶಸ್ವಿಯಾಗಲು ಬೇಕಾದ ಎಲ್ಲವನ್ನೂ ತಿಳಿಯುತ್ತೀರಿ.
ಅರಣ್ಯ ಕೃಷಿ ಮಾಡಿ ಸಕ್ಸಸ್ ಆಗಿರುವ ಮಾರ್ಗದರ್ಶಕರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ಚಾರೆ. ಭಾರತದಲ್ಲಿ, ಸಾಂಪ್ರದಾಯಿಕ ಕೃಷಿ ವಿಧಾನಗಳಿಗೆ ಪರ್ಯಾಯವಾಗಿ ಅರಣ್ಯ ಕೃಷಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ.ಈ ಅವಕಾಶವನ್ನು ಬಳಸಿಕೊಂಡು ನೀವು ಅರಣ್ಯ ಕೃಷಿ ಮಾಡಬಹುದು.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 36Min
ಪಾಠಗಳ ಸಂಖ್ಯೆ
13 ವೀಡಿಯೊಗಳು
ನೀವು ಕಲಿಯುವುದು
Completion Certificate