ತೇಗ ಬೆಳೆದರೆ ಲಾಭ ಅನ್ನುವಂತೆ ಭಾರತದಲ್ಲಿನ ತೇಗದ ಕೃಷಿಯಲ್ಲಿ ಉತ್ತಮ ಲಾಭ ಪಡೆಯುವ ಅವಕಾಶವಿದೆ. ದಿನದಿಂದ ದಿನಕ್ಕೆ ತೇಗದ ಮರಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಸರಿಯಾಗಿ ತಿಳಿದುಕೊಂಡು ತೇಗ ವನ್ನು ಬೆಳೆದರೆ ಈ ಕೃಷಿಯಲ್ಲಿ ಯಶಸ್ವಿಯಾಗಬಹುದು. ಆದರೆ, ಟೀಕ್ ವುಡ್ ಕೃಷಿ ಆರಂಭಕ್ಕೂ ಮೊದಲು ತೇಗವನ್ನು ಹೇಗೆ ಬೆಳೆಯಬೇಕು ಅನ್ನುವುದನ್ನು ನಾಟಿ ವಿಧಾನದಿಂದಲೇ ತಿಳಿದುಕೊಳ್ಳಬೇಕು.
ತೇಗದ ಕೃಷಿಯ ಕುರಿತಾದ ಈ ಸಮಗ್ರ ಕೋರ್ಸ್, ತೇಗದ ಗಿಡಗಳನ್ನು ನಾಟಿ ಮಾಡುವುದರಿಂದ ಹಿಡಿದು 20 ವರ್ಷಗಳಲ್ಲಿ ಹೇಗೆ ಆದಾಯ ಪಡೆಯುವವರೆಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ. ತೇಗದ ಬೆಳವಣಿಗೆಗ ಸೂಕ್ತವಾದ ಪರಿಸ್ಥಿತಿ, ತೇಗದ ಸರಿಯಾದ ಜಾತಿಗಳನ್ನು ಹೇಗೆ ಆಯ್ಕೆ ಮಾಡುವುದು, ತೇಗದ ಗಿಡಗಳನ್ನು ನೆಟ್ಟು, ನಿರ್ವಹಣೆ ಮಾಡಲು ಬೇಕಾದ ಎಲ್ಲವನ್ನೂ ಕಲಿಯುವಿರಿ.
ಕೃಷಿಗೆ ಭೂಮಿಯ ಆಯ್ಕೆಯಿಂದ ಹಿಡಿದು, ಮಣ್ಣು, ನೀರು, ಗೊಬ್ಬರ , ಕೀಟ ಮತ್ತು ರೋಗ ನಿರ್ವಹಣೆ, ನೀರಾವರಿ,ಮಾರುಕಟ್ಟೆ ಬೇಡಿಕೆ, ಬೆಲೆ ನಿಗದಿ ಮತ್ತು ತೇಗದ ಮರದ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಹೀಗೆ ಈ ಕೃಷಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ.
ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನ ರೈತ ಪುರುಷೋತ್ತಮ ಐತಾಳ್ ಆಸಕ್ತಿಯಿಂದ ಉದ್ಯೋಗವನ್ನು ತೊರೆದು ತೇಗದ ಕೃಷಿಯನ್ನು ಆರಂಭಿಸಿ ಅತ್ಯುತ್ತಮ ಯಶಸ್ಸು ಪಡೆದುಕೊಂಡಿದ್ದಾರೆ. ತೇಗದ ಮರದ ಕೃಷಿಯಲ್ಲಿ ಅಪಾರ ಅನುಭವ ಹೊಂದಿ ಯಶಸ್ವಿಯಾಗಿರೋ ಇವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.
ತೇಗದ ಕೃಷಿ ಮಾಡಿ ಲಾಭ ಗಳಿಸುವ ಆಸಕ್ತಿ ನಿಮಗೂ ಇದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ನೀವೂ ಕೃಷಿ ಮಾಡಿ ಯಶಸ್ವಿಯಾಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 44Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate