ಯುವ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಹಾಗೂ ಮಹಿಳಾ ಉದ್ಯಮಶೀಲತೆಯ ಅಭಿವೃದ್ಧಿಯನ್ನು ಉತ್ತೇಜಿಸಲು ಡಿಸೈನ್ ಮಾಡಲಾಗಿರುವ ಕೋರ್ಸ್ ಇದಾಗಿದೆ. ಈ ಕೋರ್ಸ್, ಮಹಾತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ಸ್ವಂತ ಬಿಸಿನೆಸ್ ಪ್ರಾರಂಭಿಸಲು ಹಾಗೂ ಬೆಳೆಸಲು ಸಹಾಯ ಮಾಡುತ್ತದೆ.
ನಮ್ಮ ಪರಿಣಿತ ಮಾರ್ಗದರ್ಶಕರಾದ ಸುಪ್ರಿಯಾ ಕಾಮತ್, ಮೀರಾ ಶಿವಂಗಯ್ಯ, ಛಾಯಾ ನಂಜಪ್ಪ ಮತ್ತು ಜೆಸ್ಸಿ ಲಾರೆನ್ಸ್, ಇಲ್ಲಿ ನಿಮಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಜೊತೆಗೆ ತಮ್ಮ ಜ್ಞಾನ ಮತ್ತು ಅನುಭವದ ಸಂಪತ್ತನ್ನು ಹಂಚುತ್ತಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿನೆಸ್ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಉಮಾ ರೆಡ್ಡಿ ಅವರು ತಮ್ಮ ತಂದೆಯಿಂದ ಸಾಲ ಪಡೆದು, ಸರ್ಕ್ಯೂಟ್ ಬೋರ್ಡ್ ಬಿಸಿನೆಸ್ ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ, ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಪ್ರಿಯಾ ಕಾಮತ್ ಅವರು ತಮ್ಮ ಮಾವನ ಬಿಸಿನೆಸ್ ಅನ್ನು ವಹಿಸಿಕೊಂಡು, ಅದನ್ನು ಮೇಲ್ದರ್ಜೆಗೇರಿಸಿದರು. ಮೀರಾ ಶಿವಂಗಯ್ಯ ಅವರು ಪ್ರಿಂಟಿಂಗ್ ಪ್ರೆಸ್ ಉದ್ಯಮವನ್ನು ಆರಂಭಿಸಿ ಅನೇಕ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಪಿಯು ಕಾಲೇಜ್ ಸಹ ಪ್ರಾರಂಭಿಸಿದ್ದಾರೆ. ಛಾಯಾ ನಂಜಪ್ಪ ಅವರು ನೆಕ್ಟರ್ ಫ್ರೆಶ್ ಎಂಬ ಅಗ್ರಿ-ಸೆಕ್ಟರ್ ಉದ್ಯಮವನ್ನು ಆರಂಭಿಸಿದರು. ಜೆಸ್ಸಿ ಲಾರೆನ್ಸ್ ಅವರು, ಅನೇಕ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗಾರ್ಮೆಂಟ್ ಫ್ಯಾಕ್ಟರಿಯನ್ನು ಆರಂಭಿಸಿದರು.
ಈ ಕೋರ್ಸ್, ಯುವ ಮಹಿಳಾ ಉದ್ಯಮಿಗಳಿಗೆ ಯಶಸ್ವಿ ಮಹಿಳೆಯರಿಂದ ಕಲಿಯಲು ಸಹಾಯ ಮಾಡುತ್ತದೆ. ಅಲ್ಲದೆ ತಮ್ಮದೇ ಆದ ಯಶಸ್ಸಿನ ಕಥೆಗಳನ್ನು ಸೃಷ್ಟಿಸಲು ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಪಡೆಯಲು ಪರಿಪೂರ್ಣ ಅವಕಾಶವಾಗಿದೆ. ಈಗಲೇ ನಮ್ಮ ಕೋರ್ಸ್ ವೀಕ್ಷಿಸಿ, ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 46Min
ಪಾಠಗಳ ಸಂಖ್ಯೆ
12 ವೀಡಿಯೊಗಳು
ನೀವು ಕಲಿಯುವುದು
Completion Certificate