IndianMoney
 0 from 0 ರೇಟಿಂಗ್‌ಗಳು
 2Hrs 14Min

ಕೃಷಿ ಉದ್ಯಮ ಕೋರ್ಸ್: ಗ್ರಾಸ್ ರೂಟ್ ಆರ್ಗಾನಿಕ್ಸ್ ಫಾರ್ಮ್ಸ್

ಕೃಷಿ ಉದ್ಯಮ ಮಾಡಿ ರೈತೋದ್ಯಮಿಯಾಗಿ ಯಶಸ್ಸು ಕಾಣೋದಕ್ಕೆ ಈ ಗ್ರಾಸ್‌ರೂಟ್ಸ್ ಆರ್ಗಾನಿಕ್ ಫಾರ್ಮ್‌ನ ಯಶಸ್ಸು ಕೋರ್ಸ್ ನಿಂದ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 57s

  • 2
    ಮಾರ್ಗದರ್ಶಕರ ಪರಿಚಯ

    19m 15s

  • 3
    ಗಾಣದ ಎಣ್ಣೆ ಬಿಸಿನೆಸ್ - ಸಂಪೂರ್ಣ ವಿವರ

    21m 42s

  • 4
    ಸಾವಯವ ಬೆಲ್ಲ ತಯಾರಿಸುವ ವಿಧಾನ

    16m 20s

  • 5
    ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಿಸೋದು ಹೇಗೆ?

    18m 3s

  • 6
    ಭತ್ತದ ಕೃಷಿಯಲ್ಲಿ ಹೆಚ್ಚು ಲಾಭ ಪಡೆಯೋದು ಹೇಗೆ?

    12m 49s

  • 7
    ಯೂನಿಟ್ ಎಕನಾಮಿಕ್ಸ್

    10m 39s

  • 8
    ಮಾರ್ಕೆಟಿಂಗ್ ನ ಮಹತ್ವ

    11m 46s

  • 9
    ಸವಾಲುಗಳನ್ನು ಎದುರಿಸುವ ಬಗೆ

    9m 50s

  • 10
    ಕೋರ್ಸ್‌ನ ಸಾರಾಂಶ

    4m 23s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕೃಷಿ ಉದ್ಯಮ ಮಾಡಿ ಯಶಸ್ವಿಯಾಗಬೇಕು ಅನ್ನುವವರಿಗೆ ಈ ಗ್ರಾಸ್‌ರೂಟ್ಸ್ ಆರ್ಗಾನಿಕ್ ಫಾರ್ಮ್ ನ ಯಶಸ್ಸಿನ ಕೋರ್ಸ್ ಉತ್ತಮ ಆಯ್ಕೆ. ಈ  ಕೋರ್ಸ್ ನ ಮೂಲಕ ನೀವು ಉತ್ತಮ ಗುಣಮಟ್ಟದ ಆರ್ಗಾನಿಕ್ ಉತ್ಪನ್ನಗಳನ್ನು ಬೆಳೆಸುವುದರಿಂದ ಹಿಡಿದು ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಸ್ಟ್ರಾಟೆಜಿಯನ್ನು ಅಭಿವೃದ್ಧಿಪಡಿಸುವವರೆಗೆ ಎಲ್ಲ ಅಗತ್ಯ ಜ್ಞಾನವನ್ನು ವಿವರವಾಗಿ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಬಿಸಿನೆಸ್ ಅನ್ನು ಬೆಳೆಸಲು ಮತ್ತು ಅದರ ಬೆಳವಣಿಗೆಯನ್ನು ಮಾಪನ ಮಾಡಲು ಅಗತ್ಯವಿರುವ ಎಲ್ಲಾ ಸ್ಟ್ರಾಟೆಜಿಗಳು ಮತ್ತು ಟೆಕ್ನಿಕ್ ಗಳನ್ನು ನೀವು ಇಲ್ಲಿ ಕಲಿಯುತ್ತೀರಿ. 

ಮಂಡ್ಯದ ನೆಲಮನೆಯಲ್ಲಿರುವ ಗ್ರಾಸ್‌ರೂಟ್ ಆರ್ಗಾನಿಕ್ ಫಾರ್ಮ್, ಸುಸ್ಥಿರ ಅಭ್ಯಾಸಗಳಿಗೆ ಆದ್ಯತೆ ನೀಡುವ ಮತ್ತು ಆರೋಗ್ಯಕರ, ತಾಜಾ ಆಹಾರವನ್ನು ಬೆಳೆಸುವ ಸಮಗ್ರ ಆರ್ಗಾನಿಕ್ ಕೃಷಿ ವ್ಯವಸ್ಥೆಯ ಉಜ್ವಲ ಉದಾಹರಣೆಯಾಗಿದೆ. ಫಾರ್ಮ್ ಬಗ್ಗೆ ಹೆಚ್ಚಿನ ಪ್ಯಾಷನ್ ಹೊಂದಿರುವ ಮತ್ತು ಸಾಂಪ್ರದಾಯಿಕ ಆಹಾರ ಉತ್ಪಾದನಾ ವಿಧಾನಗಳನ್ನು ಸಂರಕ್ಷಿಸುವ ಬದ್ಧತೆಯನ್ನು ಹೊಂದಿರುವ ಗ್ರಾಮೀಣ ಮಹಿಳೆಯರು ಈ ಫಾರ್ಮ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. 

ಗ್ರಾಸ್‌ರೂಟ್ ಆರ್ಗ್ಯಾನಿಕ್ ಫಾರ್ಮ್‌ನ ವಿಶೇಷತೆ ಎಂದರೆ ಎತ್ತಿನ ಗಾಣದ ಮೂಲಕ ಎಣ್ಣೆಯನ್ನು ಉತ್ಪಾದನೆ. ಈ ರೀತಿಯ ಗಾಣದ ಮೂಲಕ ಎಣ್ಣೆಯನ್ನು ತೆಗೆಯುವುದು ಶತಮಾನಗಳಿಂದ ಚಾಲ್ತಿಯಲ್ಲಿರುವ ಒಂದು ಸಾಂಪ್ರದಾಯಿಕ ವಿಧಾನವಾಗಿದೆ. ಈ ಎಣ್ಣೆಗಳನ್ನು ರಾಸಾಯನಿಕಗಳು ಅಥವಾ ಕೃತಕ ಪ್ರಕ್ರಿಯೆಗಳಿಲ್ಲದೆ ಉತ್ಪಾದಿಸಲಾಗುತ್ತದೆ, ಇದು ಆರೋಗ್ಯಕರ ಮತ್ತು ರುಚಿಕರವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. 

ಈ ಫಾರ್ಮ್ ಸಾವಯವ ಬೆಲ್ಲವನ್ನು ಸಹ ಉತ್ಪಾದಿಸುತ್ತದೆ, ಕಬ್ಬಿನ ರಸದಿಂದ ತಯಾರಿಸಿದ ಈ ಬೆಲ್ಲಗಳು ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುತ್ತದೆ. ಗ್ರಾಸ್‌ರೂಟ್ ಆರ್ಗಾನಿಕ್ ಫಾರ್ಮ್ ಸಮಗ್ರ ಕೃಷಿ ವ್ಯವಸ್ಥೆಗೆ ಒಂದು ಉತ್ತಮ ಉದಾಹರಣೆಯಾಗಿದೆ. 

ನಮ್ಮ ಮಾರ್ಗದರ್ಶಕರಾಗಿರುವ ಮತ್ತು ಗ್ರಾಸ್‌ರೂಟ್ ಆರ್ಗ್ಯಾನಿಕ್ ಫಾರ್ಮ್‌ನ ಮಾಲೀಕರಾಗಿರುವ ಕಮಲೇಶ್ ಅವರು ಉತ್ತಮ ಗುಣಮಟ್ಟದ ಆರ್ಗಾನಿಕ್ ಉತ್ಪನ್ನಗಳನ್ನು ಉತ್ಪಾದಿಸಲು ಮತ್ತು ಉದ್ಯೋಗವನ್ನು ಒದಗಿಸಲು ಸುಸ್ಥಿರವಾದ ಬಿಸಿನೆಸ್ ಮಾಡೆಲ್ ಅನ್ನು ರಚಿಸಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಡೆಡಿಕೇಶನ್ ನಿಂದಾಗಿ ಅದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅವರೇ ನಿಮಗೆ ಈ ಕೃಷಿ ಉದ್ಯಮದ ಬಗ್ಗೆ ಮಾರ್ಗದರ್ಶನ ಮಾಡ್ತಾರೆ. 

ನೀವು ನಿಮ್ಮ ಕೃಷಿಯನ್ನು ಕೃಷಿ ಉದ್ಯಮ ವಾಗಿ ಬದಲಾಯಿಸುವ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ಅನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 14Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ