ಈ ಚಾಕೊಲೇಟ್ ಬಿಸಿನೆಸ್ ಕೋರ್ಸ್ ನಿಮ್ಮದೇ ಸ್ವಂತ ಚಾಕೊಲೇಟ್ ತಯಾರಿ ಬಿಸಿನೆಸ್ ಪ್ರಾರಂಭಿಸುವ ನಿಟ್ಟಿನಲ್ಲಿ ಪರಿಪೂರ್ಣ ಮಾರ್ಗದರ್ಶಿಯಾಗಿದೆ. ಚಾಕೊಲೇಟ್ ಇಂಡಸ್ಟ್ರಿಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಯಶಸ್ವಿ ಚಾಕೊಲೇಟ್ ಬಿಸಿನೆಸ್ ಪ್ಲಾನ್ ರೂಪಿಸುವವರೆಗೆ ಚಾಕೊಲೇಟ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನ ಪ್ರತಿಯೊಂದು ಹಂತದ ಬಗ್ಗೆ ನಿಮಗೆ ಸೂಕ್ತ ಮಾರ್ಗದರ್ಶನ ನೀಡಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ನಿಮ್ಮ ಚಾಕೊಲೇಟ್ ಬಿಸಿನೆಸ್ ಗೆ ಉತ್ತಮ-ಗುಣಮಟ್ಟದ ಪದಾರ್ಥಗಳನ್ನು ಹೇಗೆ ಖರೀದಿಸುವುದು, ಯುನಿಕ್ ಫ್ಲೇವರ್ ಕಾಂಬಿನೇಶನ್ ಗಳನ್ನು ಹೇಗೆ ಸಿದ್ದಪಡಿಸುವುದು ಮತ್ತು ಸುಂದರವಾದ ಪ್ಯಾಕೇಜಿಂಗ್ ಹೇಗೆ ವಿನ್ಯಾಸಗೊಳಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ನಿಮ್ಮ ಮಾರಾಟವನ್ನು ಮತ್ತು ಲಾಭವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮ ಚಾಕೊಲೇಟ್ ಗಳನ್ನು ಆನ್‌ಲೈನ್ ಮತ್ತು ಆಫ್ ಲೈನ್ ನಲ್ಲಿ ಹೇಗೆ ಮಾರಾಟ ಮಾಡುವುದನ್ನು ಕೂಡ ಕಲಿಯುವಿರಿ.
ಈ ಕೋರ್ಸ್‌ನ ಮಾರ್ಗದರ್ಶಕರಾದ ಪ್ರಿಯಾ ಜೈನ್ ಅವರು ಅನುಭವಿ ಚಾಕೊಲೇಟರ್ ಆಗಿದ್ದು, ಅವರು ತಮ್ಮ ಬಿಸಿನೆಸ್ ಗಾಗಿ ದಣಿವರಿಯದಂತೆ ಶ್ರಮಿಸಿದ್ದಾರೆ. ಚಾಕೊಲೇಟ್ ತಯಾರಿಕೆ ಬಗೆಗಿನ ಅವರ ಪ್ಯಾಷನ್ ಮತ್ತು ಕಠಿಣ ಪರಿಶ್ರಮವು ಅವರನ್ನು ಇಂದು ಈ ಬಿಸಿನೆಸ್ ನಲ್ಲಿನ ಅತ್ಯುತ್ತಮ ಚಾಕೊಲೇಟರ್‌ಗಳಲ್ಲಿ ಒಬ್ಬರನ್ನಾಗಿಸಿದೆ. ಪ್ರಿಯಾ ಜೈನ್ ಅವರು ಮಾರ್ಗದರ್ಶಕರಾಗಿರುವ ಈ ಕೋರ್ಸ್ ಮೂಲಕ ನೀವು ಈ ಬಿಸಿನೆಸ್ ನ ಎಲ್ಲಾ ಸ್ಟ್ರಾಟೆಜಿಗಳ ಬಗ್ಗೆ ವಿವರವಾಗಿ ಕಲಿಯುತ್ತೀರಿ.
ಕೊನೆಯಲ್ಲಿ, ನೀವು ಸಹ ಈ ಲಾಭದಾಯಕವಾದ ಮತ್ತು ಆನಂದದಾಯಕವಾದ ಚಾಕೊಲೇಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸಿದರೆ ಈ ಚಾಕೊಲೇಟ್ ತಯಾರಿ ಬಿಸಿನೆಸ್ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಹೀಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು ಚಾಕೊಲೇಟ್ ತಯಾರಿ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 6Min
ಪಾಠಗಳ ಸಂಖ್ಯೆ
10 ವೀಡಿಯೊಗಳು
ನೀವು ಕಲಿಯುವುದು
Completion Certificate