ಇಂದಿನ ವೇಗದ ಮತ್ತು ಹೆಚ್ಚು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಜನಸಮೂಹದ ಮಧ್ಯೆ ಎದ್ದು ಕಾಣುವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ನೀವು ವಾಣಿಜ್ಯೋದ್ಯಮಿಯಾಗಿರಲಿ, ಉದ್ಯೋಗಾಕಾಂಕ್ಷಿಯಾಗಿರಲಿ ಅಥವಾ ವೃತ್ತಿಪರರಾಗಿರಲಿ ಅಥವಾ ಪ್ರಬಲವಾದ ಪರ್ಸನಲ್ ಬ್ರ್ಯಾಂಡ್ ಹೊಂದಲು ಬಯಸುವವರಾಗಲಿ ನಿಮ್ಮ ಗುರಿಗಳನ್ನು ಸಾಧಿಸುವ ನಿಟ್ಟನಲ್ಲಿ ಈ ಪರ್ಸನಲ್ ಬ್ರ್ಯಾಂಡಿಂಗ್ ಕೋರ್ಸ್ ವಿನ್ಯಾಸಗೊಳಿಸಿದೆ.
ಹಾಗಾದರೆ, ಪರ್ಸನಲ್ ಬ್ರ್ಯಾಂಡಿಂಗ್ ಎಂದರೇನು? ನಿಮ್ಮ ಯುನಿಕ್ ವ್ಯಾಲ್ಯೂ ಪ್ರಪೋಸಿಷನ್ ಗುರುತಿಸುವುದು ಮತ್ತು ಅದನ್ನು ನಿಮ್ಮ ಟಾರ್ಗೆಟ್ ಆಡಿಯನ್ಸ್ ಗೆ ಕಮ್ಯುನಿಕೇಟ್ ಮಾಡುವುದಾಗಿದೆ. ಇದು ಪರಿಣಿತರಾಗಿ ನಿಮ್ಮನ್ನು ಸ್ಥಾಪಿಸುವುದು ಮತ್ತು ಈ ಮೂಲಕ ಖ್ಯಾತಿಯನ್ನು ಪಡೆಯುವುದಾಗಿದೆ. ಪರ್ಸನಲ್ ಬ್ರ್ಯಾಂಡಿಂಗ್, ನಿಮ್ಮ ವ್ಯಕ್ತಿತ್ವ, ಮೌಲ್ಯಗಳು, ಕೌಶಲ್ಯಗಳು ಮತ್ತು ಅನುಭವಗಳನ್ನು ಸಹ ಒಳಗೊಂಡಿರುತ್ತದೆ.
ಆರಂಭದಿಂದ ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ಜೊತೆಗೆ ಬಲವಾದ ಬ್ರ್ಯಾಂಡ್ ಗುರುತನ್ನು ರಚಿಸುವ ಪ್ರಾಮುಖ್ಯತೆಯನ್ನು ಮತ್ತು ವಿವಿಧ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅದನ್ನು ಪರಿಣಾಮಕಾರಿಯಾಗಿ ಹೇಗೆ ಕಮ್ಯುನಿಕೇಟ್ ಮಾಡುವುದು ಎಂಬುದನ್ನು ನೀವು ಕಲಿಯುವಿರಿ.
ನಿಮ್ಮ ಬ್ರ್ಯಾಂಡ್ ಸ್ಟೋರಿಯನ್ನು ರಚಿಸುವುದು, ನಿಮ್ಮ ಟಾರ್ಗೆಟ್ ಆಡಿಯನ್ಸ್ ನ ಡಿಫೈನ್ ಮಾಡುವುದು, ಬ್ರ್ಯಾಂಡ್ ಮೆಸೇಜ್ ರಚಿಸುವುದು, ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸುವುದು ಮತ್ತು ನಿಮ್ಮ ಬ್ರ್ಯಾಂಡ್ ವಿಸಿಬಿಲಿಟಿಯನ್ನು ಹೆಚ್ಚಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದು ಮುಂತಾದ ವಿವಿಧ ವಿಷಯಗಳನ್ನು ನಾವು ತಿಳಿಸುತ್ತೇವೆ. ಸ್ಥಿರವಾದ ಬ್ರ್ಯಾಂಡ್ ಇಮೇಜ್ ಹೇಗೆ ನಿರ್ವಹಿಸುವುದು ಮತ್ತು ನಿಮ್ಮ ಬ್ರ್ಯಾಂಡಿಂಗ್ ಪ್ರಯತ್ನಗಳ ಪರಿಣಾಮಕಾರಿತ್ವವನ್ನು ಹೇಗೆ ಅಳೆಯುವುದು ಎಂಬುದನ್ನು ಸಹ ನಾವು ಚರ್ಚಿಸುತ್ತೇವೆ.
ಈ ಕೋರ್ಸ್‌ನ ಅಂತ್ಯದ ವೇಳೆಗೆ, ಪರ್ಸನಲ್ ಬ್ರ್ಯಾಂಡಿಂಗ್ ಎಂದರೇನು, ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಅದನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಿರಿ. ನಿಮ್ಮ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆಯಲು ಮತ್ತು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಅಗತ್ಯವಿರುವ ದಾರಿ ಮತ್ತು ಜ್ಞಾನವನ್ನು ನೀವು ಪಡೆಯುತ್ತೀರಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 26Min
ಪಾಠಗಳ ಸಂಖ್ಯೆ
10 ವೀಡಿಯೊಗಳು
ನೀವು ಕಲಿಯುವುದು
Completion Certificate