8m 49s
10m 33s
10m 31s
7m 54s
ಅಜೋಲ ಅನ್ನುವುದು ಒಂದು ಜಲಸಸ್ಯವಾಗಿದೆ. ಇದು ಜಾನುವಾರುಗಳಿಗೆ, ವಿಶೇಷವಾಗಿ ಮೀನು ಮತ್ತು ಕೋಳಿಗಳಿಗೆ ಅತೀ ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರ. ಇದಲ್ಲದೆ ಈ ಸಸ್ಯಗಳಲ್ಲಿ ಸಾರಜನಕ ಮತ್ತು ಭಾರವಾದ ಲೋಹಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದರಿಂದ ಬೆಳೆಗಳಿಗೆ ಇವುಗಳು ಅಮೂಲ್ಯವಾದ ಜೈವಿಕ ಗೊಬ್ಬರವಾಗಿದೆ. ಹಾಗಾಗಿ ಅಜೋಲ ಈಗ ಲಾಭದಾಯಕ ಕೃಷಿ.
ಅಜೋಲ ಕೃಷಿ ಮಾಡುವುದು ಹೇಗೆ ಎಂಬುವುದನ್ನು ಕಲಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ನಲ್ಲಿ ನೀವು ಅಜೋಲ ಬೆಳೆಯುವುದು ಹೇಗೆ, ನೀರಿನ ಅವಶ್ಯಕತೆಗಳು ಮತ್ತು ಕೊಯ್ಲು ತಂತ್ರಗಳನ್ನು ಒಳಗೊಂಡಂತೆ ಅಜೋಲಾ ಫಾರ್ಮ್ ನಿರ್ವಹಣೆ ಹೇಗೆ ಮಾಡುವುದು, ಅಜೋಲವನ್ನು ಫೀಡ್ ಮತ್ತು ಜೈವಿಕ ಗೊಬ್ಬರವಾಗಿ ಬಳಸಲು ಸಂಸ್ಕರಿಸುವುದು ಹೇಗೆ ಎಂಬುವುದನ್ನು ತಿಳಿಯುವಿರಿ.
ಅಜೋಲಾ ಕೃಷಿ ಲಾಭದಾಯಕವೇ? ಎಂಬ ಪ್ರಶ್ನೆ ನಿಮ್ಮಲ್ಲಿ ಇದ್ದರೆ, ಖಂಡಿತವಾಗಿಯೂ ಹೌದು. ಇಂದು ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ದತಿಗೆ ಇಂದು ಹೆಚ್ಚಿನ ಬೇಡಿಕೆ ಇರುವುದರಿಂದ ಅಜೋಲಾ ಕೃಷಿ ತ್ವರಿತವಾಗಿ ರೈತರಿಗೆ ಲಾಭದಾಯಕ ಉದ್ಯಮವಾಗುತ್ತಿದೆ. ಇದಲ್ಲದೆ ಕಡಿಮೆ ಬಂಡವಾಳ ಮತ್ತು ಹೆಚ್ಚಿನ ಇಳುವರಿ ಸಾಮರ್ಥ್ಯ ಹೊಂದಿರುವುದರಿಂದ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಲಾಭವನ್ನು ಹೆಚ್ಚಿಸಲು ಬಯಸುವವರಿಗೆ ಇದು ಸೂಕ್ತ ಕೃಷಿಯಾಗಿದೆ. ಅಜೋಲ ಕೃಷಿಯೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಲು ಇಂದೇ ಈ ಕೋರ್ಸ್ ವೀಕ್ಷಿಸಿ ಮತ್ತು ಸುಸ್ಥಿರ ಮತ್ತು ಲಾಭದಾಯಕ ಬೆಳೆಯ ಲಾಭವನ್ನು ಪಡೆಯಲು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಿ.
ಈ ಕೋರ್ಸ್ ಒಳಗೊಂಡಿದೆ