ಮನೆಯಿಂದಲೇ ಮಾಡೋ ಬಿಸಿನೆಸ್ ಬಗ್ಗೆ ಗೃಹಿಣಿಯರು ಸಾಕಷ್ಟು ಆಸಕ್ತಿ ಹೊಂದಿರುತ್ತಾರೆ. ಅಂತಹವರಿಗೆಂದೇ ಈ ಟೆರಾಕೋಟ ಆಭರಣ ತಯಾರಿಕೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನಲ್ಲಿ ಟೆರಾಕೋಟಾ ಜೇಡಿಮಣ್ಣಿನಿಂದ ಅದ್ಭುತವಾದ ಆಭರಣಗಳನ್ನು ರೂಪಿಸುವುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.
ಇನ್ನುಳಿದಂತೆ ಈ ಕೋರ್ಸ್ ನಲ್ಲಿ ವಿವಿಧ ರೀತಿಯ ಟೆರಾಕೋಟಾ ಆಭರಣಗಳಾದ ನೆಕ್ಲೇಸ್ಗಳು, ಕಿವಿಯೋಲೆಗಳು ಮತ್ತು ಬಳೆಗಳನ್ನು ತಯಾರಿಸುವುದು, ತಯಾರಿಕೆಯ ವಿವಿಧ ಹಂತಗಳು, ಮಣ್ಣಿನ ಆಯ್ಕೆ ಮತ್ತು ಆಭರಣ ತಯಾರಿಕೆಗೆ ಮಣ್ಣಿನ ಸಿದ್ಧತೆ, ವಿವಿಧ ರೀತಿಯ ಮೋಲ್ಜ್ ಗಳ ಆಯ್ಕೆ, ಗ್ರಾಹಕರಿಗೆ ಇಷ್ಟವಾಗೋ ರೀತಿಯ ಆಭರಣಗಳ ಸೆಲೆಕ್ಷನ್, ಗ್ರಾಹಕರ ಆಕರ್ಷಣೆ, ಆಭರಣ ತಯಾರಿಸಲು ತಗಲುವ ಸಮಯ ಹಾಗೂ ವೆಚ್ಚ, ಬೆಲೆ ನಿಗದಿ, ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಇ-ಕಾಮರ್ಸ್ ವೆಬ್ಸೈಟ್ಗಳು ಮತ್ತು ಇತರ ಆನ್ಲೈನ್ ಮಾರುಕಟ್ಟೆ ಸ್ಥಳಗಳನ್ನು ಬಳಸಿಕೊಂಡು ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಹೀಗೆ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.
ಟೆರಾಕೋಟಾ ಆಭರಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅಶ್ವಿನಿ ದೇವಾಡಿಗ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡುತ್ತಾರೆ.
ನೀವು ಮನೆಯಿಂದಲೇ ಟೆರಾಕೋಟಾ ಜ್ಯುವಲರಿ ಬಿಸಿನೆಸ್ ಆರಂಭಿಸುವ ಯೋಚನೆ ನಿಮಗಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ, ಯಶಸ್ವಿ ಟೆರಾಕೋಟಾ ಆಭರಣ ಉದ್ಯಮಿಯಾಗಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 6Min
ಪಾಠಗಳ ಸಂಖ್ಯೆ
11 ವೀಡಿಯೊಗಳು
ನೀವು ಕಲಿಯುವುದು
Completion Certificate