ಸಾಂಬಾರ ಪದಾರ್ಥಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯು ಲಾಭದಾಯಕ ಬೆಳೆಯಾಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಕೋರ್ಸ್, ಏಲಕ್ಕಿಯನ್ನು ಯಶಸ್ವಿಯಾಗಿ ಕೃಷಿ ಮಾಡಲು ಮತ್ತು ಮಾರಾಟಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ತಂತ್ರಗಳನ್ನು ರೈತರಿಗೆ ಕಲಿಸಿ ಕೊಡಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಇಂದು ಏಲಕ್ಕಿಗೆ ಹೆಚ್ಚಿನ ಮಾರುಕಟ್ಟೆ ಇರುವುದರಿಂದ ಈ ಕೃಷಿ ಲಾಭದಾಯಕವಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏಲಕ್ಕಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಈ ವಲಯದ ಬೆಳವಣಿಗೆಯ ಸಾಮರ್ಥ್ಯವು ದೊಡ್ಡದಾಗಿದೆ. ಈ ಏಲಕ್ಕಿ ಕೃಷಿ ಸಂಪೂರ್ಣ ಪ್ರಾಕ್ಟಿಕಲ್ ಆಗಿರುವುದರಿಂದ ಈ ಕೋರ್ಸ್ ಮೂಲಕ ಯಾರು ಬೇಕಾದರೂ ಈ ಕೃಷಿಯನ್ನು ಕಲಿಯಬಹುದು. ಈ ಕೋರ್ಸ್ನಲ್ಲಿ ಶಿವಮೊಗ್ಗದ ಹಿರಿಯ ಏಲಕ್ಕಿ ಕೃಷಿಕ ಸುಬ್ಬಾರಾವ್ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್ನಲ್ಲಿ ಏಲಕ್ಕಿ ಕೃಷಿಯ ಪ್ರಾಮುಖ್ಯತೆ, ಕೃಷಿ ತಂತ್ರಗಳು, ಮಾರುಕಟ್ಟೆ ಮೌಲ್ಯಮಾಪನ, ಕೊಯ್ಲು ಮತ್ತು ಕೊಯ್ಲಿನ ನಂತರದ ಸಂಸ್ಕರಣೆ, ಹಾಗೆಯೇ ಬೆಳೆಯ ರಫ್ತು ಮತ್ತು ಮಾರುಕಟ್ಟೆ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿರುವುದು ಮಾತ್ರವಲ್ಲದೆ, ರೈತರು ಇಳುವರಿಯನ್ನು ಹೆಚ್ಚಿಸುವುದು, ಲಾಭವನ್ನು ಹೆಚ್ಚಿಸುವುದು ಮತ್ತು ವೆಚ್ಚವನ್ನು ಹೇಗೆ ಕಡಿಮೆ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್ನಲ್ಲಿ ತಿಳಿಸಲಾಗಿದೆ. ರೈತರು ತಮ್ಮ ಬೆಳೆ ಬಂಡವಾಳವನ್ನು ವೈವಿಧ್ಯಗೊಳಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಉತ್ತಮ ಅವಕಾಶವನ್ನು ಈ ಕೋರ್ಸ್ ನೀಡುತ್ತದೆ.
ಮಾರ್ಗದರ್ಶಕರಾದ ಸುಬ್ಬಾರಾವ್ ಅವರು ತಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಂಡು ರೈತರಿಗೆ ಏಲಕ್ಕಿ ಕೃಷಿಯಲ್ಲಿ ಯಶಸ್ಸಿನತ್ತ ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ಇಂದೇ ಈ ಕೋರ್ಸ್ ವೀಕ್ಷಿಸಿ ಮತ್ತು ಏಲಕ್ಕಿ ಕೃಷಿಯನ್ನು ಕಲಿತು ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 5Min
ಪಾಠಗಳ ಸಂಖ್ಯೆ
10 ವೀಡಿಯೊಗಳು
ನೀವು ಕಲಿಯುವುದು
Completion Certificate