ಲಾಭದಾಯಕ ಬೆಳೆಗಳನ್ನು ಹುಡುಕುತ್ತಿರುವ ರೈತರಿಗೆ ಪಪ್ಪಾಯಿ ಕೃಷಿ ಉತ್ತಮ ಆಯ್ಕೆ. ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ಇಳುವರಿಯ ಸಾಮರ್ಥ್ಯದೊಂದಿಗೆ ಪಪ್ಪಾಯಿ ಕೃಷಿಯು ಬೇಡಿಕೆಯಿರುವ ಬೆಳೆಯಾಗಿದೆ. ನೀವು ಪಪ್ಪಾಯಿ ಕೃಷಿ ಪ್ರಾರಂಭಿಸುವಲ್ಲಿ ಆಸಕ್ತಿ ಹೊಂದಿದ್ದರೆ ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ.
ಈ ಕೋರ್ಸ್ ಪಪ್ಪಾಯಿ ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತದೆ. ಮಣ್ಣು,ಗೊಬ್ಬರ,ನಾಟಿ,ನೀರಾವರಿಯಿಂದ ಹಿಡಿದು ಕಟಾವಿನ ವರೆಗೆ ಎಲ್ಲ ಮಾಹಿತಿ. ಹಾಗೆಯೇ ಖರೀದಿದಾರರನ್ನು ಹೇಗೆ ಕಂಡುಹಿಡಿಯುವುದು, ಬೆಲೆಗಳ ಬಗ್ಗೆ ಮಾತುಕತೆ ಮಾಡುವುದು ಸೇರಿದಂತೆ ಪಪ್ಪಾಯಿ ಉತ್ಪನ್ನಗಳ ವಿವಿಧ ಮಾರ್ಕೆಟಿಂಗ್ ತಂತ್ರಗಳ ಜತೆಗೆ ಪಪ್ಪಾಯಿಯ ವಿವಿಧ ಪ್ರಭೇದಗಳು, ನಿರ್ದಿಷ್ಟ ಬೆಳವಣಿಗೆಯ ಅವಶ್ಯಕತೆ ಹಾಗೂ ಅವರ ಇನ್ನಿತರ ವಿಚಾರಗಳ ಬಗ್ಗೆಯೂ ಈ ಕೋರ್ಸ್ ನಲ್ಲಿ ಕಲಿಯುವಿರಿ.
ಪಪ್ಪಾಯಿ ಕೃಷಿಯ ಪ್ರಮುಖ ಪ್ರಯೋಜನವೆಂದರೆ ಕಡಿಮೆ ನಿರ್ವಹಣೆ ಹೆಚ್ಚು ಲಾಭ. ನೀವು ಸರಿಯಾದ ನಿರ್ವಹಣೆ ಮಾಡಿದರೆ ಪಪ್ಪಾಯಿ ಕೃಷಿಯಿಂದ ಅದ್ಭುತ ಇಳುವರಿ ಪಡೆದು ಲಾಭ ಗಳಿಸಬಹುದು.ಈ ಕೋರ್ಸ್ ನಿಮಗೆ ಪಪ್ಪಾಯಿ ಕೃಷಿ ಮಾಡಿ ಲಾಭವನ್ನು ಹೆಚ್ಚಿಸಲು ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತದೆ.
ಹಿರಿಯ ರೈತ ರಮೇಶ್ ಜಿ ಅವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸಮಗ್ರ ಕೃಷಿಯಾಗಿ ಪರಿವರ್ತಿಸಿ ಸವಾಲುಗಳನ್ನು ಮೆಟ್ಟಿ ನಿಂತು ಪಪ್ಪಾಯ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈ ಕೋರ್ಸ್‌ನಲ್ಲಿ, ಅವರು ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ ಮತ್ತು ತಮ್ಮ ಸವಾಲುಗಳನ್ನು ಕೃಷಿಯಲ್ಲಿ ಬೆಳವಣಿಗೆಗೆ ಅವಕಾಶಗಳಾಗಿ ಪರಿವರ್ತಿಸಲು ಇತರರನ್ನು ಪ್ರೇರೇಪಿಸುತ್ತಾರೆ.
ಪಪ್ಪಾಯಿ ಕೃಷಿ ರೈತರಿಗೆ ಲಾಭದಾಯಕ ಆಯ್ಕೆಯಾಗಿದೆ. ಪಪ್ಪಾಯಿ ಕೃಷಿ ಮಾಡಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳು ಈ ಕೋರ್ಸ್ ನಲ್ಲಿದೆ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 34Min
ಪಾಠಗಳ ಸಂಖ್ಯೆ
18 ವೀಡಿಯೊಗಳು
ನೀವು ಕಲಿಯುವುದು
Completion Certificate