ನಿಂಬೆ ಕೃಷಿ ಕೋರ್ಸ್ ಗೆ ಸ್ವಾಗತ. ನೀವು ಲಾಭದಾಯಕ ಕೃಷಿಯನ್ನು ಆರಂಭಿಸಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ ನಿಂಬೆ ಕೃಷಿ ನಿಮಗೆ ಸೂಕ್ತ ಆಯ್ಕೆಯಾಗಿದೆ!
ನಿಂಬೆ ಕೃಷಿಯು ಅದರ ಹೆಚ್ಚಿನ ಲಾಭದಾಯಕ ಸಾಮರ್ಥ್ಯದಿಂದಾಗಿ ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದರಲ್ಲಿ ನೀವು ಸರಿಯಾದ ಜ್ಞಾನ ಮತ್ತು ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅದ್ಭುತ ಆದಾಯ ಗಳಿಸಬಹುದು! ನಿಂಬೆ ಕೃಷಿಯ ಕುರಿತಾದ ಈ ಸಮಗ್ರ ಕೋರ್ಸ್ ನಿಮಗೆ ಈ ಕೃಷಿಯ ಕುರಿತಾದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಒದಗಿಸುತ್ತದೆ.
ಈ ಕೋರ್ಸ್ ನಿಂಬೆಯನ್ನು ಬೆಳೆಯಲು ಬೇಕಾದ ಭೂಮಿ ಸಿದ್ಧತೆಯಿಂದ ಹಿಡಿದು ಅತ್ಯಾಧುನಿಕ ಕೃಷಿ ತಂತ್ರಗಳವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ನಿಂಬೆ ಫಾರ್ಮ್‌ಗೆ ಸರಿಯಾದ ಮಣ್ಣು, ಹವಾಮಾನ ಮತ್ತು ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು, ತಳಿ ಆಯ್ಕೆ, ನಾಟಿ ವಿಧಾನ, ಗೊಬ್ಬರ ನೀರು ನಿರ್ವಹಣೆ ಮತ್ತು ನಿಂಬೆ ಗಿಡಗಳ ಕಾಳಜಿ ಬಗ್ಗೆಯೂ ನೀವು ಕಲಿಯುವಿರಿ. ಜೊತೆಗೆ ನಿಮ್ಮ ಬೆಳೆಗೆ ಅಪಾಯವನ್ನುಂಟುಮಾಡುವ ಕೀಟಗಳನ್ನು ಮತ್ತು ರೋಗಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.
ಹಲವಾರು ವರ್ಷಗಳಿಂದ ನಿಂಬೆ ಕೃಷಿ ಮಾಡಿ ಯಶಸ್ವಿಯಾಗಿರೋ ಬಿ.ವಿ.ತಿಪ್ಪೇಸ್ವಾಮಿ ಮತ್ತು ಮಾಳಸಿದ್ದಪ್ಪ ಕುದರಿ ಅವರೇ ನಿಮಗೆ ಈ ಕೋರ್ಸ್ ನಲ್ಲಿ ದಾಮಾರ್ಗದರ್ಶನ ಮಾಡ್ತಾರೆ. ಬಿ.ವಿ.ತಿಪ್ಪೇಸ್ವಾಮಿ ಅವರು 4 ನಿಂಬೆ ಗಿಡಗಳಿಂದ ಆರಂಭಿಸಿ ಈಗ 40 ಎಕರೆ ನಿಂಬೆ ತೋಟ ಹೊಂದಿದ್ದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮಾಳಸಿದ್ದಪ್ಪ ಕುದರಿ ಅವರು 3 ಎಕರೆಯಲ್ಲಿ ನಿಂಬೆ ಬೆಳೆಯಲು ಆರಂಭಿಸಿದರು ಮತ್ತು ಅವರು ತಮ್ಮ ಕಠಿಣ ಪರಿಶ್ರಮದಿಂದ ಇನ್ನೂ ದೊಡ್ಡ ಮಟ್ಟಕ್ಕೆ ವಿಸ್ತರಿಸಿದ್ದಾರೆ,.
ಈ ಮಾರ್ಗದರ್ಶಕರೇ ನಿಮಗೆ ನಿಂಬೆ ಕೃಷಿಯಲ್ಲಿ ಗರಿಷ್ಠ ಲಾಭ ಪಡೆಯೋದು ಹೇಗೆ, ನಿಂಬೆ ಬೆಳೆಯನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ಬಗ್ಗೆಯೂ ಸಹ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಾರೆ.
ನೀವು ನಿಂಬೆ ಕೃಷಿ ಮಾಡಲು ಸಿದ್ಧರಿದ್ದರೆ ಈಗಲೇ ಈ ಕೋರ್ಸ್ ಅನ್ನು ವೀಕ್ಷಿಸಿ ಲಾಭದಾಯಕ ನಿಂಬೆ ಕೃಷಿ ಮಾಡಿ ಲಾಭ ಗಳಿಸಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 46Min
ಪಾಠಗಳ ಸಂಖ್ಯೆ
18 ವೀಡಿಯೊಗಳು
ನೀವು ಕಲಿಯುವುದು
Completion Certificate