ಕೋರ್ಸ್ : ಹಂದಿ ಸಾಕಣೆ : ಅಡ್ವಾನ್ಸ್ಡ್ ಕೋರ್ಸ್
ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown
5m 24s
6m 23s
12m 54s
13m 18s
10m 25s
11m 20s
11m 11s
9m 30s
10m 44s
8m 48s
ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown
ನೀವು ಹಂದಿ ಸಾಕಾಣಿಕೆ ಮಾಡಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, ನಮ್ಮ ಈ ಸಮಗ್ರ ಹಂದಿ ಸಾಕಣೆ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ! ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಉಪಕರಣಗಳು ಮತ್ತು ಜ್ಞಾನವನ್ನು ನಿಮಗೆ ಒದಗಿಸಲು ನಮ್ಮ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಚಾರ್ಟರ್ಡ್ ಅಕೌಂಟೆಂಟ್ ನಿಂದ ಹಂದಿ ಸಾಕಣೆದಾರರಾಗಿ ಪರಿವರ್ತನೆಗೊಂಡ ಮೆಲ್ವಿನ್ ಲೂಸಿಸ್ ಅವರು ಈ ಕೋರ್ಸ್ ನ ಮಾರ್ಗದರ್ಶಕರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಅವರು ಕುವೈತ್ ಯುದ್ಧದಲ್ಲಿ ಗಳಿಸಿದ್ದೆಲ್ಲವನ್ನು ಕಳೆದುಕೊಂಡರು. ಆದರೆ ಕುಟುಂಬದ ಬೆಂಬಲದೊಂದಿಗೆ ಅವರು ಭಾರತಕ್ಕೆ ಮರಳಿ ಹಂದಿ ಸಾಕಾಣಿಕೆ ಬಿಸಿನೆಸ್ ಪ್ರಾರಂಭಿಸಿದರು. ಅವರು ತಮ್ಮ ಈ ಬಿಸಿನೆಸ್ ಅನ್ನು 20-30 ಹಂದಿಗಳಿಂದ ಆರಂಭಿಸಿ ಇಂದು 200-300ರಷ್ಟು ಹಂದಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಅವರ ಈ ಸಾಧನೆ ಮಹತ್ವಾಕಾಂಕ್ಷಿ ರೈತರಿಗೆ ಸ್ಫೂರ್ತಿಯಾಗಿದೆ.
ಸರಿಯಾದ ತಳಿಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಮೂಲಸೌಕರ್ಯವನ್ನು ಒದಗಿಸುವುದು ಮತ್ತು ನಿಮ್ಮ ಹಂದಿಗಳ ಆರೋಗ್ಯವನ್ನು ನಿರ್ವಹಿಸುವುದು ಸೇರಿದಂತೆ ಹೊಸದಾಗಿ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಗುರಿಗಳು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ಹಂದಿ ಸಾಕಾಣಿಕೆಯ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವ ಬಗ್ಗೆ ಸಹ ನಮ್ಮ ಅನುಭವಿ ಮಾರ್ಗದರ್ಶಕರು ನಿಮಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ
ಹಂದಿ ಸಾಕಾಣಿಕೆಯ ಪ್ರಾಯೋಗಿಕ ಅಂಶಗಳ ಜೊತೆಗೆ, ನಮ್ಮ ಈ ಕೋರ್ಸ್ ಹಂದಿ ಸಾಕಾಣಿಕೆಯ ಎಕನಾಮಿಕ್ಸ್ ಬಗ್ಗೆ ಸಹ ತಿಳಿಸಿಕೊಡುತ್ತದೆ, ಇದರ ಜೊತೆಗೆ ಮಾರ್ಕೆಟ್ ಡಿಮ್ಯಾಂಡ್, ಪ್ರೈಸ್ ಟ್ರೆಂಡ್ಸ್ ಮತ್ತು ಸೇಲ್ಸ್ ಚಾನೆಲ್ ಗಳನ್ನು ಅರ್ಥಮಾಡಿಕೊಳ್ಳಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ. ನಮ್ಮ ಈ ಕೋರ್ಸ್ ಮೂಲಕ ನೀವು ಲಾಭವನ್ನು ಹೆಚ್ಚಿಸಬಹುದು ಮತ್ತು ಸುಸ್ಥಿರ, ದೀರ್ಘಾವಧಿಯ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ನಿರ್ಮಿಸಬಹುದು.
ನೀವು ಹಂದಿ ಸಾಕಾಣಿಕೆಗೆ ಹೊಸಬರೇ ಆಗಿರಲಿ ಅಥವಾ ಸ್ವಲ್ಪ ಅನುಭವವನ್ನು ಹೊಂದಿರುವವರಾಗಿರಲಿ, ನಮ್ಮ ಈ ಹಂದಿ ಸಾಕಣೆ ಕೋರ್ಸ್ ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಮಾರ್ಗದರ್ಶನ ನೀಡುತ್ತದೆ. ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ಹಂದಿ ಸಾಕಣೆಯ ಲಾಭದಾಯಕ ಜಗತ್ತಿನಲ್ಲಿ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಕೋರ್ಸ್ ಒಳಗೊಂಡಿದೆ