ಕಡಿಮೆ ಬಂಡವಾಳದಲ್ಲಿ ಮನೆಯಲ್ಲೇ ಸಣ್ಣ ಬಿಸಿನೆಸ್ ಮಾಡಿ ಕೈತುಂಬಾ ಸಂಪಾದನೆ ಮಾಡಬೇಕೆನ್ನುವವರಿಗಾಗಿನೇ ಈ ಕ್ಯಾಂಡಲ್ ಮೇಕಿಂಗ್ ಕೋರ್ಸ್ನ ಡಿಸೈನ್ ಮಾಡಲಾಗಿದೆ. ಮಹಿಳೆಯರು, ನಿರುದ್ಯೋಗಿಗಳು, ಸಣ್ಣ ಉದ್ಯಮ ಆಸಕ್ತರು ಸೇರಿದಂತೆ ಪ್ರತಿಯೊಬ್ಬ ಉದ್ಯಮ ಆಕಾಂಕ್ಷಿಗಳಿಗೂ ಈ ಕೋರ್ಸ್ ದಾರಿದೀಪವಾಗಲಿದೆ. ದೇಶ-ವಿದೇಶಗಳಲ್ಲಿ ಸಾಮಾನ್ಯ ಕ್ಯಾಂಡಲ್ನಿಂದ ಹಿಡಿದು ಲಕ್ಸುರಿ ಕ್ಯಾಂಡಲ್ವರೆಗೆ ಇರುವ ಬೇಡಿಕೆ, ಅವಕಾಶಗಳ ಬಗ್ಗೆ ಈ ಕೋರ್ಸ್ ಕಂಪ್ಲೀಟ್ ಆಗಿ ತಿಳಿಸಿಕೊಡುತ್ತದೆ.
ಕೇವಲ 5 ಸಾವಿರ ಬಂಡವಾಳದಿಂದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಆರಂಭಿಸಿ ಇಂದು ತಮ್ಮದೇ ಒಂದು ಸಂಸ್ಥೆ ತೆರೆದು ದೇಶವಷ್ಟೇ ಅಲ್ಲದೇ ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಯಶಸ್ವಿ ಮಹಿಳಾ ಸಾಧಕಿ ಮೈಸೂರಿನ ಶ್ರೀವಿದ್ಯಾ ಕಾಮತ್ ಅವರೇ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಬಗ್ಗೆ ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾರೆ.
ಈ ಕೋರ್ಸ್ನಲ್ಲಿ ನೀವು ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ಗೆ ಅಗತ್ಯವಾಗಿರುವ ಮೋಲ್ಡ್, ವ್ಯಾಕ್ಸ್ ಸೇರಿದಂತೆ ಇನ್ನಿತರ ಸಲಕರಣೆಗಳ ಬಗ್ಗೆ ಕಲಿಯುತ್ತೀರ. ಕ್ಯಾಂಡಲ್ ತಯಾರಿಸುವ ಬಗ್ಗೆ ಪ್ರಾಕ್ಟಿಕಲ್ ಆಗಿ ಕಲಿಯುತ್ತೀರ. ತಯಾರಿಸಿದ ಕ್ಯಾಂಡಲ್ಗಳನ್ನ ಮಾರಾಟ ಮಾಡುವುದು ಹೇಗೆ ಮತ್ತು ಎಲ್ಲಿ ಎಂಬುವುದು ಕಲಿಯುತ್ತೀರ. ವಿದೇಶಗಳಿಗೆ ರಫ್ತು ಮಾಡುವುದು ಹೇಗೆ ಎಂದು ಕಲಿಯುತ್ತೀರ. ಅಂತೀಮವಾಗಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ನಲ್ಲಿ ಆದಾಯ ಎಷ್ಟು ಗಳಿಸಬಹುದು ಅನ್ನೋದನ್ನು ಕಲಿಯುತ್ತೀರ. ಇನ್ಯಾಕೆ ತಡ, ಈಗಲೆ ಈ ಕೋರ್ಸ್ ವೀಕ್ಷಿಸಿ ನೀವು ಕ್ಯಾಂಡಲ್ ಮೇಕಿಂಗ್ ಬಗ್ಗೆ ಕಲಿತು ಯಶಸ್ವಿ ಉದ್ಯಮಿಯಾಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 27Min
ಪಾಠಗಳ ಸಂಖ್ಯೆ
17 ವೀಡಿಯೊಗಳು
ನೀವು ಕಲಿಯುವುದು
Completion Certificate