ಲಾಭದಾಯಕ ಸೋಲಾರ್ ಫಾರ್ಮ್ ಆರಂಭಿಸುವ ಆಸಕ್ತಿ ನಿಮ್ಮಲ್ಲಿದ್ದರೆ ಲಾಭದಾಯಕ ಸೋಲಾರ್ ಫಾರ್ಮ್ ಮಾಡಿ ಆದಾಯ ಗಳಿಸುವುದು ಹೇಗೆ ಎಂಬುದನ್ನು ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು. ಇಂದು ಪ್ರಪಂಚವು ನವೀಕರಿಸಬಹುದಾದ ಇಂಧನ ಮೂಲಗಳತ್ತ ಹೆಚ್ಚು ಸಾಗುತ್ತಿರುವಂತೆ, ಭಾರತದಲ್ಲಿ ಸೌರ ವಿದ್ಯುತ್ ಸ್ಥಾವರಗಳ ಬೇಡಿಕೆಯು ಗಗನಕ್ಕೇರುತ್ತಿದೆ. ಈ ಪ್ರವೃತ್ತಿಯನ್ನು ಲಾಭ ಮಾಡಿಕೊಳ್ಳಲು ಮತ್ತು ಸೋಲಾರ್ ಫಾರ್ಮ್ ಬಿಸಿನೆಸ್ ಆರಂಭಿಸಲು ಬೇಕಾದ ಎಲ್ಲಾ ಮಾಹಿತಿಯನ್ನು ನೀವು ಕೋರ್ಸ್ ಮೂಲಕ ಪಡೆಯುವಿರಿ.
ಸೋಲಾರ್ ಫಾರ್ಮ್ ಬಿಸಿನೆಸ್ ನಲ್ಲಿ ಅನುಭವ ಹೊಂದಿರುವ ಅರವಿಂದ ವಲ್ಲಿ ಮತ್ತು ಸತೀಶ್ ಭಕ್ಷಿ ಅವರೇ ನಿಮಗೆ ಲಾಭದಾಯಕ ಸೋಲಾರ್ ಪಾರ್ಮ್ ಮಾಡುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.
ಈ ಕೋರ್ಸ್ ನಲ್ಲಿ ಸೋಲಾರ್ ಪ್ಲಾಂಟ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಸೋಲಾರ್ ಫಾರ್ಮ್ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಬಿಸಿನೆಸ್ ಪ್ಲಾನ್, ನೀವು ಸೋಲಾರ್ ಪ್ಲಾಂಟ್ ಹಾಕುವುದಿದ್ರೆ ತಿಳಿದಿರಬೇಕಾದ ವಿಚಾರಗಳು, ಸೋಲಾರ್ ಯುನಿಟ್ ಸೆಟ್ ಅಪ್ ಮಾಡುವುದು ಹೇಗೆ, ಇದರ ಪ್ರಕ್ರಿಯೆ, ಸೋಲಾರ್ ಯುನಿಟ್ ಸೆಟ್ ಅಪ್ ಗೆ ಬೇಕಾದ ಬಂಡವಾಳ, ಸೋಲಾರ್ ಪವರ್ ಜನರೇಟ್ ಮಾಡಿ ಬಳಸುವ ವಿಧಾನ, ಇದರಿಂದಾಗೋ ಲಾಭ ಹೀಗೇ ಸಂಪೂರ್ಣವಾಗಿ ನೀವು ಇಲ್ಲಿ ಕಲಿಯಬಹುದು.
ನೀವೇನಾದ್ರೂ ಸೋಲಾರ್ ಫಾರ್ಮ್ ಮಾಡಿ ಆದಾಯಗಳಿಸಬೇಕು ಅನ್ನೋ ಯೋಚನೆಯಲ್ಲಿದ್ರೆ ತಡ ಮಾಡಬೇಡಿ ,ಇಂದೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಲಾಭದಾಯಕ ಸೋಲಾರ್ ಫಾರ್ಮ್ ನಿರ್ನಿಸಿ ಆದಾಯ ಗಳಿಸುವತ್ತ ಮೊದಲ ಹೆಜ್ಜೆ ಇರಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 57Min
ಪಾಠಗಳ ಸಂಖ್ಯೆ
19 ವೀಡಿಯೊಗಳು
ನೀವು ಕಲಿಯುವುದು
Completion Certificate